ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆ – ಶಾಲಾ ಪ್ರಾರಂಭೋತ್ಸವ

0
105

ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆಯ ವರದೇಂದ್ರ ಸದನದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು. ಎ. ಯೋಗೀಶ ಹೆಗ್ಡೆಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ ಎಸ್.‌ ಎಸ್.‌ ಎಲ್.‌ ಸಿ. ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಮಾನ್ಸಿ ನಾಯಕ್‌ ಮತ್ತು ಸಿದ್ಧಿರಾಜ್‌ ಡಿ. ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಕೆ. ಕಮಲಾಕ್ಷ ಕಾಮತ್‌ ಇವರು ಎಸ್.‌ ಎಸ್.‌ ಎಲ್.‌ ಸಿ. ಪರೀಕ್ಷೆಯಲ್ಲಿ ಶಾಲೆಗೆ ಮೊದಲ ಮೂರು ಸ್ಥಾನ ಪಡೆದ ಮತ್ತು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 35 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಅಭಿನಂದಿಸಿದರು ಹಾಗೂ ಶಾಲೆಗೆ ದೇಣಿಗೆಯನ್ನು ನೀಡಿದರು. ಶಾಲಾ ಸಂಚಾಲಕ ನರೇಂದ್ರ ಕಾಮತ್‌ ಕೆ. ಇವರು ಪ್ರಸ್ತಾವನೆಗೈದರು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ವೈ ಮೋಹನ ಶೆಣೈಯವರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿ ಹಾರೈಸಿದರು. ಮುಖ್ಯಶಿಕ್ಷಕ ಆರ್.‌ ನಾರಾಯಣ ಶೆಣೈಯವರು ಸ್ವಾಗತಿಸಿದರು. ಪೂರ್ಣಿಮಾ ಪ್ರಭು ವಿದ್ಯಾರ್ಥಿಗಳ ವಿವರ ವಾಚಿಸಿದರು. ಸಂಜಯ್‌ ಕುಮಾರ್‌ ವಂದನಾರ್ಪಣೆ ಮಾಡಿದರು. ಗಣೇಶ ಜಾಲ್ಸೂರ್‌ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here