ನೀರ್ಕೆರೆ ಶಾಲೆಯಲ್ಲಿ ಪ್ರಾರಂಬೋತ್ಸವ

0
45

ಮೂಡುಬಿದಿರೆ: ನೀರ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೊತ್ಸವ ಸಂಭ್ರಮದಿಂದ ನಡೆಯಿತು.
ಊರ ಕೇರಿಗಳಲ್ಲಿ ಮಕ್ಕಳ ದಾಖಲಾತಿ ಆಂದೋಲನ ಜಾಥವನ್ನು ಆಯೋಜಿಸಿದ್ದು ಮಕ್ಕಳು ಭಾಗವಹಿಸಿದರು. ನಂತರದಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪುಸ್ತಕ ವಿತರಣೆಯನ್ನು ಮಾಡಲಾಯಿತು.

ತೆಂಕಮಿಜಾರು ಪಿಡಿಒ ರೋಹಿಣಿ, ಹಿರಿಯರಾದ ಅಜಿತ್‌ರಾಜ್ ಜೈನ್, ಶಶಿಕಾಂತ್ ಶೆಟ್ಟಿಗಾರ್, ಗೋಪಾಲ ಗೌಡ, ಗಿರೀಶ್ ಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಜಯಲಕ್ಷ್ಮಿ ಮತ್ತು ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ ಜೋಗಿ, ಪೋಷಕರು, ಮುಖ್ಯ ಶಿಕ್ಷಕಿ ಯಮುನಾ, ಶಿಕ್ಷಕರು ಉಪಸ್ಥಿತರಿದ್ದರು.
ಆರತಿ ಬೆಳಗಿ ಬೆಲೂನ್ ಮತ್ತು ಗುಲಾಬಿ, ಸಿಹಿ ನೀಡಿ ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

LEAVE A REPLY

Please enter your comment!
Please enter your name here