ಉಡುಪಿ:ಜೋಲಿ ಕುತ್ತಿಗೆಗೆ ಸಿಲುಕಿ 1 ವರ್ಷದ ಮಗು ಸಾವು..!

0
784

ಉಡುಪಿ: ಮಕ್ಕಳನ್ನು ಜೋಲಿಗೆ ಹಾಕುವ ಪೋಷಕರೇ ಎಚ್ಚರ, ಜೋಲಿ ಕುತ್ತಿಗೆಗೆ ಸಿಲುಕಿ ಒಂದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ಜೋಲಿಯಲ್ಲಿ ಮಲಗಿದ್ದ ಒಂದು ವರ್ಷದ ಹೆಣ್ಣು ಮಗುವೊಂದು ಎಚ್ಚರಗೊಂಡು ಕೆಳಗೆ ಇಳಿಯಲು ಯತ್ನಿಸಿದ ವೇಳೆ ಸೀರೆ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿ ಮೃತಪಟ್ಟ ಘಟನೆ ನಡೆದಿದೆ.
ಕಾಳಮ್ಮ ಅಯ್ಯಪ್ಪ(1) ಮೃತ ಮಗು. ಬುಧವಾರ ಬೆಳಗ್ಗೆ 8ಕ್ಕೆ ಮಗುವಿನ ತಂದೆ ಅಯ್ಯಪ್ಪ(27) ಕೆಲಸಕ್ಕೆ ಹೋಗಿದ್ದು, ಪತ್ನಿ 9.30ಕ್ಕೆ ಮಗುವನ್ನು ಜೋಲಿಯಲ್ಲಿ ಮಲಗಿಸಿ ಕೆಲಸಕ್ಕೆ ತೆರಳಿದ್ದರು. 11.30ಕ್ಕೆ ಮನೆಗೆ ಬಂದಾಗ ಜೋಲಿಗೆ ಕಟ್ಟಿದ್ದ ಸೀರೆ ಸುತ್ತಿಕೊಂಡು ಮಗು ನೇತಾಡುತ್ತಿತ್ತು. ಕೂಡಲೇ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here