ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಯುವಕ ಮೃತ್ಯು

0
116

ಫರಂಗಿಪೇಟೆ: ಬಸ್ ಢಿಕ್ಕಿಯಾಗಿ ಆಟೋ ಚಾಲಕನೊಬ್ಬ ಮೃತಪಟ್ಟ ಘಟನೆ ಹತ್ತನೇ ಮೈಲ್‌ಕಲ್ಲು ಎಂಬಲ್ಲಿ ಶುಕ್ರವಾರ ನಡೆದಿದೆ. ಅಮೆಮ್ಮಾರ್ ನಿವಾಸಿ ಪ್ರಸ್ತುತ ಹತ್ತನೇ ಮೈಲ್ ಕಲ್ಲು ಫ್ಲಾಟ್ ನಲ್ಲಿರುವ ಝಾಹಿದ್ (28) ಮೃತ ಯುವಕ.

ರಸ್ತೆ ದಾಟಲು ಹೆದರುತ್ತಿದ್ದ ಮಕ್ಕಳನ್ನು ರಸ್ತೆ ದಾಟಿಸಿ ಹಿಂದಿರುಗುವವಷ್ಟರಲ್ಲಿ ಮಂಗಳೂರಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ಝಾಹಿದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಯುವಕನ ತಂದೆ ಈ ಹಿಂದೆಯೇ ತೀರಿಹೋಗಿದ್ದು, ತಾಯಿ ಹಾಗೂ ಮೂರು ಸಹೋದರರರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here