ಅಜಿನೋರಾ ತರಬೇತಿ ಸಂಸ್ಥೆಯ ಬೈಂದೂರು ನೇತೃತ್ವದಲ್ಲಿ ಪಿ.ಯು.ಸಿ.ಯಲ್ಲಿ 90% ಅಧಿಕ ಅಂಕತೆಗೆದ
ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಅಚೀವರ್ ಮೀಟ್ ಕಾರ್ಯಕ್ರಮವನ್ನು ಸಿಟಿ ಪಾಯಿಂಟ್, ಸರ್ಕಾರಿ ಆಸ್ಪತ್ರೆಯ ಹತ್ತಿರ, ಬೈಂದೂರುನಲ್ಲಿ ಸಂಭ್ರಮದಲ್ಲಿ ನಡೆಯಿತು.
1ಬೈಟ್ ಶಾಸಕ ಗುರುರಾಜ್ ಗಂಟೆಹೊಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂಥದೊಂದು ಅದ್ಭುತ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಸ್ಪೂರ್ತಿ ತುಂಬಲು ಸಹಾಯವಾಗಿದೆ ಮತ್ತು ಈ ಹಿಂದೆ ಬೈಂದೂರಿನಲ್ಲಿ ನಡೆದಿದ್ದ ಬೃಹತ್ ಉದ್ಯೋಗ ಮೇಳದ ಯಶಸ್ಸಿಗೆ ಶ್ರಮಿಸಿದ್ದ ಅಜಿನೋರಾ ಸಂಸ್ಥೆಯು ಇಂದು ನಮ್ಮದೇ ಊರಿನಲ್ಲಿ ಕಚೇರಿ ತೆರೆಯುವ ಮೂಲಕ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ, ಸಂಸ್ಥೆಗೆ ಶುಭ ಹಾರೈಸುತ್ತಾ, ಉದ್ಯೋಗ ಪಡೆಯುವಂತಾಗಲಿ ಎಂದರು.
ಸಮಾರಂಭದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಹಲವು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಒಂದು ಶುಭ ಸಂದರ್ಭದಲ್ಲಿ ಜರ್ಮನ್ ಶಿಕ್ಷಣ ಏಕೀಕರಣ ಯೋಜನೆ ಎಸ್ಎಂಎಸ್ ಕಾಲೇಜಿನಲ್ಲಿ ಈ ವರ್ಷ ತೆರೆಲಾಗಿದೆ. ಈ ಸಂದರ್ಭದಲ್ಲಿ ವೆಂಕಟೇಶ್ ಕಿಣಿ , ಅಜೊ ಆಗಸ್ಟಿನ್ , ಮೊಹಮ್ಮದ್ ಶಾಫಿ
ಸಾಂಡ್ರ ಜಾಕೋಬ್ ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಸಾಂಡ್ರ ಜಾಕೋಬ್ ಸ್ವಾಗತಿಸಿ, ಜಪಾನ್ ವಿದ್ಯಾರ್ಥಿ, ವಿರಾಜ್ ನಿರೂಪಿಸಿ, ಪ್ರಿಂಷಾ ವಂದಿಸಿದರು.