ಸ್ಪರ್ದಾಳುಗಳಿಗೆ ಉಚಿತ ಈಜಾಡಲು ಮತ್ತು ಅವರ ಕೋಚ್‌ಗಳಿಗೆ ಪ್ರವೇಶ ನೀಡಲು ಜಿಲ್ಲಾಧಿಕಾರಿಗಳ ಜೊತೆ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾ ಚರ್ಚೆ

0
36

ಮಂಗಳೂರು ಎಮ್ಮೆಕೆರೆ ಸಿಮ್ಮಿಂಗ್‌ ಪೂಲ್‌ನಲ್ಲಿ ರಾಜ್ಯ ಮತ್ತು ದೇಶ ಅಂತರಾಷ್ಟೀಯ ಮಟ್ಟದಲ್ಲಿ ಸ್ಪರ್ಧೆ ಮಾಡಿದ ಸ್ಪರ್ದಾಳುಗಳಿಗೆ ಉಚಿತ ಈಜಾಡಲು ಮತ್ತು ಅವರ ಕೋಚ್‌ಗಳಿಗೆ ಪ್ರವೇಶ ನೀಡಲು ಜಿಲ್ಲಾಧಿಕಾರಿಗಳ ಜೊತೆ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾ ಚರ್ಚೆ

ದ.ಕ. ಜಿಲ್ಲೆಯಲ್ಲಿ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಸುಮಾರು 50 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿ ಸುಸಜ್ಜಿತವಾದ ಈಜುಕೊಳವನ್ನು ರಚನೆ ಮಾಡಿದ್ದು, ನಮ್ಮ ಈಜುಪಟುಗಳು  ಈಜುಕೊಳದ ಪ್ರಯೋಜನವನ್ನು ಪಡೆದು  ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಪದಕಗಳನ್ನು ತರುವ ಮೂಲಕ  ನಮ್ಮ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಹೆಸರು ತರಬೇಕೆಂದು ಈಜುಕೊಳವನ್ನು ಪ್ಪ್ರಾರಂಭ ಮಾಡಿದ್ದು, ಮತ್ತು ಇದೀಗ ಇದರ ಪ್ರಯೋಜನ ಸಿಗುತ್ತಿದ್ದು ದ.ಕ. ಜಿಲ್ಲೆಯಲ್ಲಿ ಅನೇಕ ಕ್ರೀಡಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಮಕ್ಕಳು ಉತ್ತಮವಾದವಂತಹ ಈಜುಕೊಳದಲ್ಲಿ ಅಭ್ಯಾಸ ಮಾಡಿ ಮುಂದೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿರುವುದು ಸಂತೋಷದ ವಿಚಾರ. ಅದುದರಿಂದ ಅಂತಹ ಕ್ರೀಡಾಪಟುಗಳಿಗೆ ಉಚಿತವಾಗಿ ಅಭ್ಯಸಿಸಲು ಅವಕಾಶ ನೀಡಬೇಕೆಂದು ಅನೇಕ ಕ್ರೀಡಾ ಸಂಸ್ಥೆಗಳು ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್‌ ಗುಂಡೂರಾವ್‌ರವರು ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಸೂಚಿಸಿದರು. ಈ ಬಗ್ಗೆ ಅನೇಕ ಚರ್ಚೆಗಳು ನಡೆದರೂ ಇನ್ನೂ ಕಾರ್ಯಗತವಾಗಿಲ್ಲ ಮಾತ್ರವಲ್ಲದೇ ಈಜುಕೊಳದ ಮೂಲ ವ್ಯವಸ್ಥೆಯನ್ನು ಬದಲಾವಣೆ ಮಾಡಿ ಅದನ್ನು ಮತ್ತೆ ವ್ಯಾಪಾರೀಕರಣ  ರೀತಿಯಲ್ಲಿ ಬದಲಾವಣೆ ಮಾಡುವಂತಹ ಕೃತ್ಯ  ನಡೆಯುತ್ತದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಮತ್ತು ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಸಭೆಯನ್ನು ಕರೆಸಿ  ಯಾರು ಅರ್ಹರಿದ್ದರೆ ಅವರಿಗೆ ಉಚಿತ ಪ್ರವೇಶವನ್ನು ನೀಡಬೇಕೆಂದು ಸಂಸ್ತೆಯ ಜೊತೆಗೆ ಜಿಲ್ಲಾಧಿಕಾರಿಯವರಲ್ಲಿ ಕ್ರಮ ಕೈಗೊಳ್ಳಬೇಕೆಂದು ಚರ್ಚೆ ನಡೆಸಲಾಯ್ತು. ನಮ್ಮ ಜಿಲ್ಲೆಯ ಕ್ರೀಡಾಪಟುಗಳಿಗೆ ಹೆಚ್ಚು ಉತ್ತೇಜನ ಸಿಗಬೇಕೆಂದು ಸರಕಾರದ ಉದ್ದೇಶವಿದ್ದು  ಈ  ಬಗ್ಗೆ ಕ್ರಮಕೈಗೊಳ್ಳಬೇಕೆಂದು ವಿಧಾನ ಪರಿಷತ್‌ ಶಾಸಕರಾದ     ಶ್ರೀ ಐವನ್‌ ಡಿʼಸೋಜಾ ಈ ಸಂದರ್ಭದಲ್ಲಿ ತಿಳಿಸಿದರು.

          ದ.ಕ. ಸ್ವಿಮ್ಮಿಂಗ್‌ ಅಸೋಸಿಯೇಷನ್‌ ನ ಅಧ್ಯಕ್ಷರ ಯತೀಶ್‌ ಬೈಕಂಪಾಡಿ, ಕಾರ್ಯದರ್ಶಿ ಮಹೇಶ್‌ ಕುಮಾರ್‌ ಕಮಿಟಿ ಸದಸ್ಯರಾದ ಯೋಗಿಶ್‌ ಭಟ್‌ ಮತ್ತು ಈಜುಪಟುಗಳ ಹೆತ್ತವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here