ಎಸ್ ವಿ ಟಿ ವಿದ್ಯಾರ್ಥಿ ಸಂಘದ ಚುನಾವಣೆ

0
146

ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿನ 2025-26 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಚುನಾವಣೆಯು ಎಲೆಕ್ಟ್ರಾನಿಕ್ ಮತಯಂತ್ರವನ್ನು ಬಳಸಿ ನಡೆಸಲಾಯಿತು. ಕಾಲೇಜಿನ ಚುನಾವಣಾ ಅಧಿಕಾರಿಯಾದ ಪ್ರಭಾತ್ ರಂಜನ್ ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವದ ಬಗ್ಗೆ ವಿವರಿಸಿ ಮಾಹಿತಿ ನೀಡಿದರು.

ಪ್ರಜಾಪ್ರಭುತ್ವ ಮಾದರಿನಲ್ಲಿ ನಡೆದ ಚುನಾವಣೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಕುಮಾರಿ ಪ್ರಥ್ವಿ ಶೆಟ್ಟಿ ಅಧ್ಯಕ್ಷರಾಗಿ, ಹತ್ತನೇ ತರಗತಿಯ ಮಾ. ಆಕಾಶ್ ಉಪಾಧ್ಯಕ್ಷರಾಗಿ ಹಾಗೂ ದ್ವಿತೀಯ ಕಲಾ ವಿಭಾಗದ ಕುಮಾರಿ ಸ್ವಾತಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ಆಡಳಿತ ಪಕ್ಷದ ಪೃಥ್ವಿ ಶೆಟ್ಟಿ ಮತ್ತು ಆಕಾಶ್ ಮಂತ್ರಿ ಮಂಡಲದ ಖಾತೆಯನ್ನು ಹಂಚಿ ಶಾಲಾ ಸರ್ಕಾರ ರಚಿಸಲಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳನ್ನು ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ, ಹಿರಿಯ ಸಹ ಶಿಕ್ಷಕರಾದ ಯೋಗೇಂದ್ರ ನಾಯಕ್ ಹಾಗೂ ಉಪನ್ಯಾಸಕ ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here