ಯೋಗ ದಿನ ನಿತ್ಯ ಮಾಡಬೇಕು: ಸುಮಾ ಶೆಟ್ಟಿ

0
178

ಆರೋಗ್ಯ ಭಾರತಿ ಮಂಗಳೂರು, ರುದ್ರ ಸಮಿತಿ  ಶ್ರೀ ಭಾರತೀ ಕಾಲೇಜು,ಮಂಗಳೂರು ಮತ್ತು ಚೂಂತಾರು ಸರೋಜಿನಿ  ಭಟ್ ಪ್ರತಿಷ್ಠಾನ(ರಿ) ಮಂಗಳೂರು ಜಿಲ್ಲಾ  ಇದರ ಜಂಟಿ ಆಶ್ರಯದಲ್ಲಿ ಜೂನ್  21 ವಿಶ್ವ ಯೋಗ ದಿನದಂದು ಯೋಗ  ಶಿಬಿರ ಕಾರ್ಯ ಕ್ರಮ ಶ್ರೀಭಾರತಿ ಕಾಲೇಜು ನಂತೂರು  ಪದವು ಇಲ್ಲಿ ಬೆಳಿಗ್ಗೆ6:30 ರಿಂದ 8 ರವಗೆ ನಡೆಯಿತು.ಯೋಗ ಗುರುಗಳಾದ ಶ್ರೀಮತಿ ಸುಮಾ ಶೆಟ್ಟಿ ಮತ್ತು ಶ್ರೀ ಕಾಟಿಪಳ್ಳ ಸುಬ್ರಮಣ್ಯ ಭಟ್ ಯೋಗ ತರಬೇತಿ ನೀಡಿದರು. ಸುಮಾರು ೨೫ ಮಂದಿ ಈ ಶಿಬಿರದ ಪ್ರಯೋಜನ ಪಡೆದರು.

ಕಾರ್ಯದರ್ಶಿ ಆರೋಗ್ಯ ಭಾರತಿ ಮಂಗಳೂರು ಶ್ರೀ ಉಮೇಶ್ ಪ್ರಭು, ಹವ್ಯಕ ಸಭಾದ  ಶ್ರೀ ಡಾ. ರಾಜೇಂದ್ರ ಪ್ರಸಾದ್, ಆರೋಗ್ಯ ಭಾರತಿ ವಿಭಾಗ ಸಂಚಾಲಕ ಶ್ರೀ ಪುರುಷೋತ್ತಮ, ಮಂಗಳೂರು ಮಹಾನಗರ ಸಂಘ ಚಾಲಕ ಶ್ರೀ ಡಾ.ಸತೀಶ್ ರಾವ್,ಆರೋಗ್ಯ ಭಾರತಿ ಜಿಲ್ಲಾಧ್ಯಕ್ಷ ಶ್ರೀ ಡಾ.ಈಶ್ವರ ಪಲ್ಲಾದೆ, ಆರೋಗ್ಯ ಭಾರತಿ ಗೌರವ ಅಧ್ಯಕ್ಷ ಶ್ರೀ ಡಾ.ಮುರಲೀ ಮೋಹನ್ ಚೂಂತಾರು, ಸರೋಜಿನಿ ಪ್ರತಿಷ್ಟಾನದ ಶ್ರೀ ಡಾ.ರಾಜಶ್ರೀ ಮೋಹನ್, ಡಾ. ಮೊಹಾಂತಿ ಉಪಸ್ಥಿತರಿದ್ದರು.

ಡಾ. ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು.ಡಾ‌. ಚೂಂತಾರು ವಂದನಾರ್ಪಣೆಗೈದರು. ಕಾಟಿಪಳ್ಳ ಸುಬ್ರಮಣ್ಯ ಭಟ್ ಯೋಗದ ಮಹತ್ವ ಮತ್ತು ಅನಿವಾರ್ಯತೆಯನ್ನು ವಿವರಿಸಿದರು.

ಶ್ರೀಮತಿ ಸುಮಾ ಶೆಟ್ಟಿ ಮಾತನಾಡಿ ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಹಾರೈಸಿದರು‌.ಪ್ರತಿ ದಿನ ಯೋಗ ಮಾಡಿದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಯೋಗದಿಂದ ರೋಗ ದೂರವಾಗುತ್ತದೆ ಎಂಧು ನುಡಿದರು.ಇದೇ ಸಂದರ್ಬದಲ್ಲಿ  ಶ್ರೀಮತಿ ಸುಮಾ ಶೆಟ್ಟಿ ಮತ್ತು  ಶ್ರೀಸುಬ್ರಮಣ್ಯ ಭಟ್ ರವರನ್ನು ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here