ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ಪ್ರತಿಷ್ಠಿತ ಪ್ಲಾಟಿನಮ್ ಪ್ರಶಸ್ತಿ

0
80

ಮೂಡುಬಿದಿರೆ: ರೋಟರಿ ಜಿಲ್ಲಾ 3181 ಇದರ 2024-25 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವು ಜೂನ್ 21, ಶನಿವಾರದಂದು ಪಿಲಿಕುಳದ ಸ್ಕೌಟ್ಸ್ ಗೈಡ್ಸ್ ಸಭಾಭವನದಲ್ಲಿ, ಜಿಲ್ಲಾ ಗವರ್ನರ್ ರೊ. ವಿಕ್ರಂ ದತ್ತ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ಪ್ರತಿಷ್ಠಿತ ಪ್ಲಾಟಿನಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮೂಡುಬಿದಿರೆ ಮಿಡ್ ಟೌನ್ ಕ್ಲಬ್ ನ ಅತ್ಯುನ್ನತ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ವಿಶಿಷ್ಟ ಸೇವಾ (Significant Service Award) ಪ್ರಶಸ್ತಿಯನ್ನು ಕ್ಲಬ್ ನ ಅಧ್ಯಕ್ಷರಾದ ರೋ. ವಿದೇಶ್. ಎಂ ಇವರು ಸ್ವೀಕರಿಸಿದರು.

ಈ ಸಮಾರಂಭದಲ್ಲಿ ರೊ. ಕುಮಾರ್ ಪೂಜಾರಿ ಇವರ ಅತ್ಯುತ್ತಮ ಸಮಾಜ ಸೇವೆಗಾಗಿ, RI Dist. 3181 Unsung Action Champion ಪ್ರಶಸ್ತಿಯನ್ನು ಪಡೆದರು. ಡಿಸ್ಟ್ರಿಕ್ಟ್ ಗವರ್ನರ್ ರೊ. ವಿಕ್ರಂ ದತ್ತ ಇವರು ಪ್ರಶಸ್ತಿ ಪ್ರಧಾನವನ್ನು ಮಾಡಿದರು, ರೊ. ರಿತೇಶ್ ಬಾಳಿಗ, ಜಿಲ್ಲಾ ಕಾರ್ಯದರ್ಶಿ, ಇವರು ಕಾರ್ಯಕ್ರಮವನ್ನು ನೆರವೇರಿಸಿದರು. ರೋಟರಿ ಜಿಲ್ಲಾ 3181 ವಿವಿಧ ಜಿಲ್ಲಾ ಪದಾಧಿಕಾರಿಗಳು, ಮಾಜಿ ಗವರ್ನರ್ ಗಳು, ಎಲ್ಲಾ ಕ್ಲಬ್ ಗಳ ಅಧ್ಯಕ್ಷ , ಕಾರ್ಯದರ್ಶಿ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ನ ಸದಸ್ಯರುಗಳಾದ ಮಹಮ್ಮದ್ ಅಸ್ಲಾಂ, ಸುಶಾಂತ್ ಕರ್ಕೇರ, ಮಹೇಂದ್ರ ಕುಮಾರ್ ಜೈನ್, ಪುಷ್ಪರಾಜ್ ಜೈನ್, ಪ್ರಶಾಂತ್ ಭಂಡಾರಿ, ಕರುಣಾಕರ್ ದೇವಾಡಿಗ, ಮುರಳಿಧರ್ ಕೋಟ್ಯಾನ್, ಕೆ.ಎಸ್. ಶೆಟ್ಟಿ, ಭಾಸ್ಕರ್ ಕೋಟ್ಯಾನ್, ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here