ಆಂಧ್ರಪ್ರದೇಶ: ಇತ್ತೀಚಿಗೆ ನವ ವಿವಾಹಿತ ಗಂಡು ಮಕ್ಕಳ ಕೊಲೆ ಪ್ರಕರಣಗಳು ಇಡೀ ದೇಶವನ್ನೇ ಬಿಚ್ಚಿಬಿಳಿಸುತ್ತಿವೆ. ಮದುವೆಯಾದ ಬಳಿಕ ಅಕ್ರಮ ಸಂಬಂಧ ಹೊಂದಿದ ಪತ್ನಿಯರು ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಭೀಕರವಾಗಿ ಕೊಲೆ ಮಾಡಿರುವ ಹಲವಾರು ಘಟನೆಗಳು ನಡೆದಿವೆ.
ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಮೇಘಾಲಯಕ್ಕೆ ಹನಿಮೂನ್ ಗೆ ಎಂದು ತೆರಳಿದ್ದ ರಾಜಾ ರಘುವಂಶಿಯ ಕೊಲೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಈ ಒಂದು ಕೊಲೆ ಮಾದರಿಯಲ್ಲಿಯೇ ಆಂಧ್ರಪ್ರದೇಶದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಆಂಧ್ರಪ್ರದೇಶದ ಗದ್ಮಾಲ್ ಪಟ್ಟಣದಲ್ಲಿ ನವವಿವಾಹಿತರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಕೊಲೆಯನ್ನು ನೆನಪಿಸುತ್ತದೆ.
ತೆಲಂಗಾಣದ ಗಾಲ್‌ನ 32 ವರ್ಷದ ತೇಜೇಶ್ವರ್ ನಂದ್ಯಾಲ್ ಎಚ್‌ಎನ್‌ಎಸ್‌ಎಸ್ ಕಾಲುವೆಯ ಬಳಿ ಶವವಾಗಿ ಪತ್ತೆಯಾಗಿದ್ದು, ಅವರ ಪತ್ನಿ ಮೇಲೆ ಅನುಮಾನ ಮೂಡಿದೆ. ತೆಜೇಶ್ವರ್ ಐಶ್ವರ್ಯಾ ಎಂಬುವವರನ್ನು ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ತೇಜೇಶ್ವರ್ ಜೂನ್ 17ರಿಂದ ಕಾಣೆಯಾಗಿದ್ದರು. ಅವರ ಸಹೋದರ ತೇಜವರ್ಧನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಮೊಬೈಲ್ ಟ್ರ್ಯಾಕ್ ಮಾಡಿ ಜೂನ್ 21ರಂದು ಕಾಲುವೆ ಬಳಿ ಶವವನ್ನು ಪತ್ತೆ ಮಾಡಿದ್ದರು. ಪತ್ನಿಯೇ ಪ್ರಿಯಕರನ ಜೊತೆ ಸೇರಿ ಸುವಾರಿ ಕೊಟ್ಟು ಪತಿ ತೇಜಸ್ವರ್ಣನ್ನು ಕೊಲೆ ಮಾಡಿಸಿದ್ದಾಳೆ ಎಂದು ತಿಳಿದುಬಂದಿದೆ.
ಮೇ 18ರಂದು ಐಶ್ವರ್ಯಾ ತೇಜೇಶ್ವರ್ ಪ್ರೇಮ ವಿವಾಹವಾಗಿದ್ದರು. ಐಶ್ವರ್ಯಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಬ್ಯಾಂಕ್ ಮ್ಯಾನೇಜರ್ ಜತೆ ವಿವಾಹೇತರ ಸಂಬಂಧ ಹೊಂದಿದ್ದಾಳೆ. ತೇಜೇಶ್ವರ್ ತಮ್ಮ ಸಂಬಂಧಗಳಿಗೆ ಅಡ್ಡಿಯಾಗಬಹುದು ಎಂದು ಭಾವಿಸಿ ಆತನನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎಂದು ತೇಜೇಶ್ವರ್ ಸಹೋದರ ಆರೋಪಿಸಿದ್ದಾರೆ.