ಶ್ರೀ ಕೃಷ್ಣ ಯೋಗ ಕೇಂದ್ರ ಉಡುಪಿ : ವಿದ್ಯಾರ್ಥಿಗಳಿಂದ ಯೋಗ ನೃತ್ಯ

0
113

ಶ್ರೀ ಕೃಷ್ಣ ಯೋಗ ಕೇಂದ್ರ  ಉಡುಪಿ ಇವರ ವತಿಯಿಂದ 11 ನೇ ವಿಶ್ವ ಯೋಗ ದಿನಾಚರಣೆಯನ್ನು ಕುಂಜಿಬೆಟ್ಟಿನ ಯಕ್ಷಗಾನ  ಕಲಾಕೇಂದ್ರ ದ  ಐ ವೈ ಸಿ ಸಭಾಂಗಣದಲ್ಲಿ  ವಿಜೃಂಭಣೆ ಯಿಂದ ಜರಗಿತು. ಉಡುಪಿಯ ಪ್ರಸಿದ್ಧ ಮನೋವೈದ್ಯ dr  ಪಿ. ವಿ. ಭಂಡಾರಿ ಹಾಗೂ ಕಟೀಲು ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ನಿವ್ರತ್ತ ಪ್ರಾಂಶುಪಾಲ  ಬಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿ ಭಾಗವಹಿಸಿದ್ದರು.  ವಿಶ್ವನಾಥ್ ಹೆಗ್ಡೆ,  ಸದಾನಂದ್ ಹೆಗ್ಡೆ, ನಾಗರಾಜ ರಾವ್ ,  ಇಂದಿರಾ  ಮುಖ್ಯಪಾಧ್ಯಾಯಿನಿ ಸರಕಾರಿ ಬಾಲಕಿಯರ ಪ್ರೌಢ ಶಾಲೆ,  ಸುಪರ್ಣ ಶೆಟ್ಟಿ  , ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಶ್ರೀ ಮುರಳಿ ಕಡೇಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಪಿ ವಿ ಭಂಡಾರಿಯವರು ಮಾತಾಡಿ ಶ್ರೀ ಕೃಷ್ಣ ಯೋಗ ಕೇಂದ್ರದ ಕಾರ್ಯಕ್ರಮ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ  ವ್ಯಕ್ತಪಡಿಸಿ ಹಿರಿಯ ನಾಗರಿಕರ ಬಗ್ಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಕೇಂದ್ರ ಕೈಗೊಂಡ ವಿವಿಧ ಕಾರ್ಯಕ್ರಮಗಳ ಬಗ್ಗೆ  ಉಚಿತ ಯೋಗಾಸನ ಪ್ರಣಾಯಾಮ ತರಗತಿಗಳ ಬಗ್ಗೆ ಹರ್ಷ ವ್ಯಕ್ತ ಪಡಿಸಿ  ಇಂದು ಯುವ ಜನಾಗ ಎದುರಿಸುತ್ತಿರುವ  ಸಮಸ್ಯೆ ಗಳ ಬಗ್ಗೆ ವಿವರಿಸಿ ಯೋಗದ ಮೂಲಕ ಅವನ್ನು ಪರಿಹರಿಸಲು ಸಾಧ್ಯ ಈ ಬಗ್ಗೆ ಸಂಶೋಧನೆಗಳು ಪ್ರಗತಿ ಯಲ್ಲಿದೆ ಎಂದರು. ಇನ್ನೊರ್ವ್ ಮುಖ್ಯ ಅತಿಥಿ ಶ್ರೀ ಬಾಲಕೃಷ್ಣ ಶೆಟ್ಟಿ ಕೂಡ ಹದಿಹರೆಯದ ಯುವ ಜನಾಂಗದ ಸಮಸ್ಯೆಗಳನ್ನು  ಬಗೆಹರಿಸಲು ಯೋಗ ಧ್ಯಾನ ಪ್ರಾಣಯಾಮ ದಿಂದ ಸಾಧ್ಯ ಎಂದರು  ರಾಘವೇಂದ್ರ ಆಚಾರ್ಯ ಸ್ವಾಗತ ಗೀತೆ ಹಾಡಿದರು. ಪ್ರೇಮ ರಿಂದ ಸ್ವಾಗತ, ಕಾರ್ಯದರ್ಶಿ ಅಮಿತ್ ಶೆಟ್ಟಿ  ವಾರ್ಷಿಕ  ವರದಿ,  ಮಮತಾ ಮತ್ತು ನಯನ , ಅಖಿಲ್ ಶೆಟ್ಟಿ  ಸಹಕರಿಸಿದರು.

ಶ್ರೀಮತಿ ಮಮತಾ ಕೊರಡ್ಕಲ್ ಧನ್ಯವಾದ ಸಮರ್ಪಿಸಿದರು. ನಂತರ ವಿವಿಧ ಶ್ರೀ ಕೃಷ್ಣ ಯೋಗದ ಶಾಖೆಗಳ ವಿದ್ಯಾರ್ಥಿಗಳಿಂದ ಯೋಗ ನ್ರತ್ಯ, ಲಘು ಪ್ರಹಸನ  ಪ್ರೇಕ್ಷಕರ ಮನಸೊರೆ ಗೊಂಡವು

LEAVE A REPLY

Please enter your comment!
Please enter your name here