ಮಂಗಳೂರು ಮಹಾನಗರ ಪಾಲಿಕೆಪದವು ವಾರ್ಡ್ ನಂಬರ್ 21 ,34ಮತ್ತು 35 ನಯಾಗರ ಲೇನ್, ಕಕ್ಕೆಬೆಟ್ಟು ಪರಿಸರಕ್ಕೆ ಐವನ್‌ ಡಿʼಸೋಜಾ ಭೇಟಿ

0
32

ಮಂಗಳೂರು : ಮಹಾನಗರ ಪಾಲಿಕೆ 21,34,35ನೇ ವಾರ್ಡ್‌ಗಳಲ್ಲಿ ಮಳೆಯಿಂದ ಉಂಟಾದ ಗುಡ್ಡ ಕುಸಿತ ಮತ್ತು ಮಳೆಯಿಂದ ತೊಂದರೆ ಉಂಟಾದ ಪ್ರದೇಶಗಳಲ್ಲಿ ನೀರು ಹೋಗಲು ಸ್ಥಳವಿಲ್ಲದೇ ನೀರು ಮನೆಗಳಿಗೆ ನುಗ್ಗಿರುವ ಬಗ್ಗೆ ಈ ಭಾಗದಲ್ಲಿ ಮಾಡಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಐವನ್‌ ಡಿʼಸೋಜಾ ಇಂಜಿನಿಯರ್‌, ಗ್ರಾಮಲೆಕ್ಕಾಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಅದಕ್ಕೆ ಪರಿಹಾರ ನೀಡುವುದರ
ಜೊತೆಗೆ ಉಂಟಾದ ತೊಂದರೆಗಳ ಬಗ್ಗೆ ಐವನ್‌ ಡಿʼಸೋಜಾರವರು ಮಹಾನಗರ ಪಾಲಕೆ ಅಡಳೀತಾಧಿಕಾರಿ ಹಾಗೂ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಮತ್ತು ಸೂಕ್ತ ನಿರ್ದೇಶನ ನೀಡಿದ್ದಾರೆ. ಈಗಾಗಲೇ ಮಳೆಯಿಂದ ಉಂಟಾದ ಭಾಗಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಮನಪಾ ಅಯುಕ್ತರು ಕೈಗೊಂಡ ಕ್ರಮದ ಬಗ್ಗೆ ವಿವರ ಪಡೆದು ಐವನ್‌ ಡಿಸೋಜಾರವರು ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ನಷ್ಟಕ್ಕೆ ಪರಿಹಾರವನ್ನು ನೀಡುವುದರ ಜೊತೆಗೆ ಎಷ್ಟು ನಷ್ಟ ಉಂಟಾಗಿದೆ ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ. ಈಗಾಗಲೇ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳ ವರದಿ ಮಾಡಿದಂತಹ ಅನೇಕ ಪ್ರಕರಣಗಳಲ್ಲಿ ಸರಕಾರದಿಂದ ಹಣ ಪಾವತಿಯಾಗಿರುವುದಿಲ್ಲ ಎಂಬ ದೂರುಗಳಿದ್ದು,

ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಮತ್ತು ಯಾವುದೇ ದೂರುಗಳು ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ದಯಾನಂದ್ ನಾಯಕ್, ಪ್ರಶಾಂತ್, ಪ್ರವೀಣ್ ಜೇಮ್ಸ್, ಸುಧಾಕರ ಜೋಗಿ, ಭೂತ್ ಅಧ್ಯಕ್ಷ ಸ್ಟ್ಯಾನಿ, ನಾಯಕರಾದ ಆಶಾಲತಾ, ಮೀನಾ ಟೆಲಿಸ್, ಚಿತ್ರ, ಪ್ರಸಾದ್, ಯುವ ಕಾಂಗ್ರೆಸ್ ನಾಯಕ ಅಭಿಷೇಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here