ದಸ್ಕತ್ ಗೆ ತುಳುನಾಡಿನ ಕಿರೀಟ

0
12

ಈ ವರ್ಷದ ಉತ್ತಮ ತುಳುಚಲನಚಿತ್ರ ದಸ್ಕತ್.
ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಭವನದಲ್ಲಿ ನಡೆದ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2025 ನಲ್ಲಿ ದಸ್ಕತ್ ಸಿನೆಮಾವು ಈ ವರ್ಷದ ಉತ್ತಮ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಇದೆ ಸಿನೆಮಾದ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಉತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ಉತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಹಾಗೂ ಸಂತೋಷ್ ಆಚಾರ್ಯ ಗುಂಪಲಾಜೆ ಉತ್ತಮ ಛಾಯಾಗ್ರಾಹಕ, ದೀಕ್ಷಿತ್ ಕೆ ಪೂಜಾರಿ ಉತ್ತಮ ನಟ, ಯುವ ಶೆಟ್ಟಿ ಉತ್ತಮ ಖಳ ನಟ, ಸಮರ್ಥನ್ ರಾವ್ ಉತ್ತಮ ಹಿನ್ನೆಲೆ ಸಂಗೀತ, ಉತ್ತಮ ಪೋಷಕ ನಟ ಮೋಹನ್ ಶೇಣಿ ಹೀಗೆ ಒಟ್ಟು 8 ಪ್ರಶಸ್ತಿಗಳನ್ನು ದಸ್ಕತ್ ಸಿನೆಮಾ ತಂಡ ಮುಡಿಗೇರಿಸಿದೆ.
ಈ ಸಿನೆಮಾ ತುಳುವಿನಲ್ಲಿ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆದೊಂದಿಗೆ ಇದೀಗ ಕನ್ನಡಕ್ಕೆ ಅನುವಾದಗೊಂಡು ಬಿಡುಗಡೆ ಗೊಂಡ ಮೊದಲ ತುಳು ಸಿನೆಮಾ ಅನ್ನೋ ಇತಿಹಾಸ ನಿರ್ಮಿಸಿದೆ.
ಈ ಸಿನೆಮಾಕ್ಕೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲಿ ನಮ್ಮ ತುಳು ಸಿನೆಮಾಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅನ್ನೋದೇ ನಮ್ಮ ಆಶಯ

LEAVE A REPLY

Please enter your comment!
Please enter your name here