ಕುದ್ರೋಳಿ : ವರ್ತಮಾನ ಕಾಲ ಘಟ್ಟದಲ್ಲಿ ಶ್ರೀ ನಾರಾಯಣ ಗುರುಗಳ ಸಂದೇಶ -ಪ್ರಸ್ತುತತೆ (ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿ) ಈ ವಿಚಾರದ ಬಗ್ಗೆ ಜುಲೈ 13 ರಂದು ನಡೆಯುವ ರಾಜ್ಯ ಮಟ್ಟದ ವಿಚಾರ ಸಂಕಿರಣದ ಆಮಂತ್ರಣ ಪತ್ರಿಕೆಯನ್ನು ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ಜೂನ್ 26 ರಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಅಧ್ಯಕ್ಷರಾದ ಜೈರಾಜ್ ಎಸ್ ಸೋಮಸುಂದರಂ ಇವರು ಬಿಡುಗಡೆಗೊಳಿಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ವಸಂತ ಕಾರಂದೂರು, ಡಾ. ಜಯರಾಜ್ , ಡಾ.ಬಿ.ಜಿ ಸುವರ್ಣ, ನಾಗೇಶ್ ಕರ್ಕೇರ, ಹರೀಶ್ ಕೆ ಪೂಜಾರಿ, ಮುದ್ದು ಮೂಡು ಬೆಳ್ಳೆ, ರಘುರಾಜ್ ಕದ್ರಿ , ಡಾ. ಜಯಪ್ರಕಾಶ್ , ಉದಯ್ ಕುಮಾರ್, ರಾಮಚಂದ್ರ ಪೂಜಾರಿ, ದೇವೇಂದ್ರ ಪೂಜಾರಿ, ರಾಜೇಂದ್ರ ಚಿಲಿಂಬಿ, ಪ್ರಥ್ವಿರಾಜ್ , ಜಯರಾಮ್ ಕಾರಂದೂರು, ಶಶಿಧರ ಹೆಗ್ಡೆ, ಭಾಸ್ಕರ್ ಮೊಯ್ಲಿ, ಅನಿಲ್ ಕುಮಾರ್, ಬೇಬಿ ಕುಂದರ್, ಕೃತಿನ್, ಮತ್ತಿತರರು ಉಪಸ್ಥಿತರಿದ್ದರು.