ಸೇವಾ ಶ್ರೇಷ್ಠತೆಯಿಂದ ಯಶಸ್ಸು ಗಳಿಸಿ -ಡಾ. ಮೋಹನ್ ಆಳ್ವ

0
112

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸಂಪನ್ನಂ ಬೀಳ್ಕೊಡುಗೆ ಸಮಾರಂಭ ನಡೆಯಿತು. ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಎಲ್ಲರಿಗೂ ಶುಭ ಹಾರೈಸಿ, ಸೇವಾ ಶ್ರೇಷ್ಠತೆ ಅತಿ ಮುಖ್ಯ. ಆ ಮೂಲಕ ಯಶಸ್ಸು ಪಡೆಯಲು ಸಾಧ್ಯ. ಇತರರಿಗೆ ನೆರವಾಗುವಾಗ ಗುಣಮಟ್ಟವನ್ನು ಕಾಯ್ದುಕೊಂಡು ಸಫಲತೆ ಕಡೆಗೆ ಸಾಗುವುದೇ ಧ್ಯೇಯವಾಗಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಪ್ರಶಾಂತ್ ಜೈನ್, ಪದವಿ ವಿಭಾಗದ ಡೀನ್ ಡಾ. ಸಪ್ನ ಕುಮಾರಿ, ಡಾ.ರೋಹಿಣಿ ಪುರೋಹಿತ, ಡಾ. ವಿನೀತಾ ಡಿ ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಸಜಿತ್ ಸ್ವಾಗತಿಸಿದರು, ಡಾ.ಗೀತಾ ನಿರೂಪಿಸಿದರು, ಡಾ.ವಿಜಯ ಲಕ್ಷ್ಮಿ ವಂದಿಸಿದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here