ವಿಶ್ವ ಕೊಂಕಣಿ ಕೇಂದ್ರ ಕೊಂಕಣಿಯಲ್ಲಿ  ಡಿಜಿಟಲ್ ಕಾರ್ಪಸ್ ಯೋಜನೆ  

0
110

ಮಂಗಳೂರು: ಗೋವಾದಲ್ಲಿ ಪೊರ್ಚುಗಲ್ ಆಡಳಿತ ಪ್ರಾರಂಭಗೊಳ್ಳುವ ಮೊದಲೇ ದಕ್ಷಿಣದ ಕಡೆಗೆ ವಲಸೆ ಬಂದವರ ಕೊಂಕಣಿಯ ಆಡು ಭಾಷೆಯಾಗಿ ಉಳಿದಿದ್ದು ಕಳೆದ ಐದಾರು ಶತಮಾನಗಳಲ್ಲಿ ಭಾಷಾ ಶಾಸ್ತ್ರೀಯವಾಗಿ ದಾಖಲಿಸಲ್ಪಡದೆ ನಷ್ಟವಾಗುತ್ತಾ ಇದೆ. ಮತ್ತು ಈ ಕಾರಣದಿಂದಾಗಿಯೇ ಇಲ್ಲಿನ ಕೊಂಕಣಿ ಜನರು ಗೋವಾದ ಪ್ರಮಾಣಬದ್ದ ಕೊಂಕಣಿಯಿಂದ ದೂರ ಉಳಿಯುವಂತಾಗಿದೆ. ಈ ವಿಶಿಷ್ಟ ಭಾಷಾ ಪ್ರಭೇದವು  ಪ್ರಾಕೃತದ ಸಾಮಿಪ್ಯದೊಂದಿಗೆ ಮೂಲರೂಪದ ಕೊಂಕಣಿಯೆನಿಸುತ್ತದೆ. ವಿಶ್ವ ಕೊಂಕಣಿ ಕೇಂದ್ರವು ಈ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಿದ್ದು ಈ ಸಲುವಾಗಿ ಒಂದು ದೊಡ್ಡ ಪ್ರಮಾಣದ ಲೇಖನ ಸಂಗ್ರಹ (ಟೆಕ್ಸ್ಟ್ ಕಾರ್ಪಸ್) ಸಿದ್ದ ಪಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆಯೆಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈಯವರು ತಿಳಿಸಿದರು. ಈ ಭಾಷಾ ಕಾರ್ಪಸ್ ಬಗ್ಗೆ ಕರೆದ ಕಾರ್ಯಕರ್ತರ  ಪ್ರಥಮ ತರಬೇತಿ ಸಭೆಯಲ್ಲಿ  ಸಾವಿರಾರು ಸಣ್ಣಸಣ್ಣ ತುಣುಕು ಲೇಖನಗಳನ್ನು ಸಮಕಾಲೀನ ಭಾಷೆ, ಕಲೆ ಸಂಸ್ಕೃತಿಗಳನ್ನು ಪ್ರತಿನಿಧಿಸುವಂತೆ  ರಚಿಸುವ ಮೂಲಕ  ದೊಡ್ಡ ಪ್ರಮಾಣದ ಲೇಖನ ಸಂಗ್ರಹ ಹೇಗೆ ಸ್ರಷ್ಟಿಸಬಹುದೆಂಬ ಬಗ್ಗೆ ಮಾಹಿತಿ ನೀಡಲಾಯಿತು. ಈ ಬಗ್ಗೆ ವಿವರಣೆ ನೀಡಿದ ಡಾ ಬಿ ದೇವದಾಸ ಪೈ ಇವರು ಡಿಜಿಟಲ್ ಕಾರ್ಪಸ್ ಆಧುನಿಕ ಕೃತಕ ಬುದ್ಧಿಮತ್ತೆಯ ಅನ್ವಯಕ್ಕೆ ಹೇಗೆ ಮತ್ತು ಎಷ್ಟು ಅಗತ್ಯವೆಂಬ  ವಿಚಾರಗಳ ಬಗ್ಗೆಯೂ ವಿಸ್ತ್ರತ ಮಾಹಿತಿ ನೀಡಿದರು. ಈ ಯೋಜನೆಯು ಸುಮಾರು ಒಂದು ವರ್ಷದ ಅವಧಿಯಲ್ಲಿ ಪೂರ್ತಿಗೊಳ್ಳಲಿದೆ.    

LEAVE A REPLY

Please enter your comment!
Please enter your name here