ಮೂಡಬಿದಿರೆ: ಮೂಡಬಿದ್ರೆ ಪರಿಸರದ ಪ್ರಮುಖ ಸಂಘಟನೆಗಳಲ್ಲಿ ಒಂದಾದ ಜವನೆರ್ ಬೆದ್ರ ಫೌಂಡೇಶನ್ (ರಿ) ನಿಂದ ‘ವಿಶ್ವ ಪತ್ರಿಕಾ ದಿನ’ದ ಪ್ರಯುಕ್ತ ಕನ್ನಡದ ಖಾಸಗಿ ಸುದ್ದಿವಾಹಿನಿ News 1st ನಲ್ಲಿ ನಿರೂಪಕನಾಗಿ ಕಾರ್ಯನಿರ್ವಹಿಸುತ್ತಿರುವ ವಾಸುದೇವ್ ಭಟ್ ಗೆ ಸನ್ಮಾನ ಮಾಡಲಾಯಿತು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಜವನೆರ್ ಬೆದ್ರ ಫೌಂಡೇಶನ್(ರಿ) ನ ಸ್ಥಾಪಕಾಧ್ಯಕ್ಷರದ ಅಮರ್ ಕೋಟೆ, ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ನಾಯಕ್, ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ, ಯುವ ಸಂಘಟನೆಯ ಸಹ ಸಂಚಾಲಕ ರಾಜೇಶ್ ಕೆಲ್ಲಪುತ್ತಿಗೆ, ರಕ್ತನಿಧಿ ಸಂಚಾಲಕ ಮನು, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.