ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಅವರು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕೊಡುಗೆಯಾಗಿ ನಿರ್ಮಿಸಿದ ಸೋಲಾರ್ ಲೈಟ್ ನ್ನು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಶ್ರೀ ಶ್ರೀ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು ಉದ್ಘಾಟಿಸಿ, ಇನ್ನರ್ ವೀಲ್ ಕ್ಲಬ್ ಇನ್ನಷ್ಟು ಸಮಾಜ ಮುಖಿಯಾಗಿ ತೊಡಗಿಸಿಕೊಳ್ಳಲಿ ಎಂದು ನೂತನ ಅಧ್ಯಕ್ಷರಾದ ಶ್ವೇತಾ ಜೈನ್ ಹಾಗೂ ಕಾರ್ಯದರ್ಶಿ ಅನಿತಾರವರಿಗೆ ಶುಭವನ್ನು ಹಾರೈಸಿ ಆಶೀರ್ವದಿಸಿದರು.
ವಕೀಲರ ಸಂಘದ ಸ್ಥಾಪಕ ಅಧ್ಯಕ್ಷರು, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷರು, ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷರಾದ ಎಂ ಬಾಹುಬಲಿ ಪ್ರಸಾದ್ ರವರು ಎಲ್ಲರಿಗೂ ಉಪಯೋಗವಾಗುವಂತಹ ಸಮಾಜಮುಖಿ ಕಾರ್ಯ ಇದಾಗಿದ್ದು, ಅತ್ಯಂತ ಉಪಯುಕ್ತವಾಗಿದೆ. ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯ ಪಕ್ಕದಲ್ಲಿ ಇರುವಂತಹ ಈ ರಸ್ತೆಯಲ್ಲಿ ಸ್ಥಳೀಯರು ಮಾತ್ರವಲ್ಲದೆ ಹೊರ ಪ್ರದೇಶದಿಂದ ಬರುವವರು ಕೂಡ ಸಂಚರಿಸುತ್ತಾರೆ ಆದ್ದರಿಂದ ಇನ್ನರ್ ವೀಲ್ ಕ್ಲಬ್ ನ ಈ ಕಾರ್ಯಕ್ರಮ ಅತ್ಯಂತ ಸಮಾಜಮುಖಿಯಾಗಿದೆ ಆಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಮೂಡುಬಿದರೆ ಚೌಟರ ಅರಮನೆಯ ಕುಲದೀಪ್ ಎಮ್., ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರಾದ ಹರೀಶ್ ನಾಯಕ್, ವಿನಯ ಹೆಗ್ದೆ, ಜಯರಾಜ್ ಕಂಬಳಿ, ಇನ್ನರ್ ವೀಲ್ ಕ್ಲಬ್ ನ ಸದಸ್ಯರಾದ ಪ್ರಕಾಶಿನಿ ಹೆಗ್ದೆ, ಸುಜಯ, ವೇದ ಕುಮಾರ, ವೀಣಾ, ರೇಷ್ಮಾ , ರಮ್ಯಾ, ಅಪೇಕ್ಷ, ದಿವ್ಯಾ ಭಾಗವಹಿಸಿದ್ದರು.