ಮುಲ್ಕಿ: ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಮುಲ್ಕಿಯ ಪ್ರಖ್ಯಾತ ವೈದ್ಯರಾದ ಡಾಕ್ಟರ್ ಬಪ್ಪನಾಡು ಪಾಂಡುರಂಗ ರಾವ್ (ಬಿ.ಪಿ ರಾವ್) ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಉಪಾಧ್ಯಕ್ಷರಾದ ವಿಶ್ವನಾಥ ಶೆಣೈ ಅವರು ಪ್ರಸ್ತಾವಿಕ ಮಾತಿನೊಂದಿಗೆ ಸರ್ವರನ್ನು ಸ್ವಾಗತಿಸಿದರು. ಕ್ಲಬ್ಬಿನ ಅಧ್ಯಕ್ಷರಾದ ಅನಿಲ್ ಅವರು ವೈದ್ಯೋ ನಾರಾಯಣ ಹರಿ ಎಂಬ ಧ್ಯೇಯ ವಾಕ್ಯದಂತೆ
ಡಾಕ್ಟರ್ ಬಿ ಪಿ ರಾವ್ ಅವರ ಸೇವೆಯನ್ನು ಶ್ಲಾಘಿಸಿದರು. ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ವೈದ್ಯರಾದ ಡಾ. ಬಿಪಿ ರಾವ್ ಮಾತನಾಡಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಪರಿಸರದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಜರಗಿಸಿ ಗುರುತಿಸಿಕೊಂಡಿದೆ, ಇವರ ಈ ಸೇವೆಯು ಹೀಗೆ ಮುಂದುವರೆಯಲಿ ಎಂದು ಹಾರೈಸಿದರು, ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅನಿಲ್ ಕುಮಾರ್, ಕಾರ್ಯದರ್ಶಿ ಅಶ್ವಿನಿ ಪ್ರಸಾದ್, ಕೋಶಾಧಿಕಾರಿ ಸಂತೋಷ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷರಾದ ಬಿ ಶಿವಪ್ರಸಾದ್ ಮಾಜಿ ಅಧ್ಯಕ್ಷ ಸುಧೀರ್ ಬಾಳಿಗಾ, ಭಾಸ್ಕರ್ ಕಾಂಚನ್, ವಿಶ್ವನಾಥ ಶೆಣೈ, ಪ್ರಫುಲ್ಲ ಅಮೀನ್ ಉಪಸ್ಥಿತರಿದ್ದರು.