ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಡಾಕ್ಟರ್ ಡೇ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ

0
38

ದಿನಾಂಕ 04.07. 2025 ರಂದು ಜೆಸಿಐ ಮುಂಡ್ಕೂರು ಭಾರ್ಗವ ಇವರ ಆಶ್ರಯದಲ್ಲಿ ಡಾಕ್ಟರ್ಸ್ ಡೇ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು. ಜೇಸಿ ಅಧ್ಯಕ್ಷ Jc. ವಸಂತ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪಾಲಡ್ಕ ಇಲ್ಲಿನ ವೈದ್ಯಾಧಿಕಾರಿ Dr. ಅನಿಲ್ ಪಿಂಟೋ ಇವರು ಮಳೆಗಾಲದಲ್ಲಿ ಬರುವ ರೋಗಗಳು ಮತ್ತು ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಇನ್ನೊಂದು ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕಿ ಸಿಸ್ಟರ್ ವಿಮಲ ಇವರು ಹೆಣ್ಣುಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ವಿಶೇಷ ಮಾಹಿತಿ ನೀಡಿದರು.

ಮುಖ್ಯ ಶಿಕ್ಷಕರಾದ ದಿನಕರ ಕುಂಭಾಶಿ ಇವರು ಪ್ರಸ್ತಾವಿಕ ಮಾತುಗಳನ್ನಾಡಿದರು. Dr. ಅನಿಲ್ ಪಿಂಟೋ ಮತ್ತು ಸಿಸ್ಟರ್ ವಿಮಲ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಲೇಡಿ ಜೇಸಿ ಅಧ್ಯಕ್ಷೆ ಸೌಮ್ಯ, ಜೆಜೇಸಿ ಅಧ್ಯಕ್ಷೆ ತಿರುಮಲ, ಕಾರ್ಯದರ್ಶಿ Jc ಉಮೇಶ್ ಕೊಲ್ಲುರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಗೆ ಪ್ರಥಮ ಚಿಕಿತ್ಸಾ ಕಿಟ್ ಮತ್ತು ನೀರಿನ ಸಮರ್ಪಕ ಬಳಕೆಯ ಭಿತ್ತಿಪತ್ರವನ್ನು ಜೇಸಿವತಿಯಿಂದ ಶಾಲೆಗೆ ನೀಡಲಾಯಿತು.

LEAVE A REPLY

Please enter your comment!
Please enter your name here