ಮೂಡುಬಿದಿರೆ: ರೋಟರಿ ಟೆಂಪಲ್‌ಟೌನ್ ಮೂಡುಬಿದಿರೆ 2024-25ನೇ ಸಾಲಿನಲ್ಲಿ ನಡೆಸಿದ ಸೇವಾ ಚಟುವಟಿಕೆಗಳಿಗಾಗಿ ರೋಟರಿ ಜಿಲ್ಲೆ 3181ರ ಡೈಮಂಡ್ ಪ್ಲಸ್ ಪ್ರಶಸ್ತಿಗೆ ಭಾಜನವಾಗಿದೆ.
ರೋಟರಿ ಟೆಂಪಲ್‌ಟೌನ್ ಬಡವರಿಗೆ ಮನೆ ನಿರ್ಮಾಣ, ಬಸ್ ತಂಗುದಾಣ, ಬಡಮಕ್ಕಳಿಗೆ ವಿದ್ಯಾರ್ಥಿವೇತನ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಮೂಲಕ ನೂರಾರು ಸೇವಾ ಚಟುವಟಿಕೆಗಳನ್ನು ನಡೆಸಿದೆ.
ಇತ್ತೀಚೆಗೆ ಪಿಲಿಕುಲದ ಸ್ಕೌಟ್‌ಗೈಡ್ಸ್ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಕ್ರಂದತ್ತ ಹಾಗೂ ಇತರ ಗಣ್ಯರಿಂದ ರೋಟರಿ ಟೆಂಪಲ್‌ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್ ಹಾಗೂ ಕಾರ್ಯದರ್ಶಿ ಹರೀಶ್ ಎಂ.ಕೆ ಹಾಗೂ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು.