ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ವಿರುದ್ಧಕೇಸ್ ದಾಖಲಿಸಿ : ಗೌತಮ್ ಅಗ್ರಹಾರ

0
66

ಕುಂಜಾಲು ದನದ ರುಂಡ ಪತ್ತೆ ಪ್ರಕರಣದಲ್ಲಿ ಹಿಂದೂ ಸಂಘ ಪರಿವಾರ, ಬಿಜೆಪಿ ಹಾಗೂ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭಾಗಿಯಾಗಿದ್ದಾರೆ ಎಂದು ಆಧಾರ ರಹಿತ ಹೇಳಿಕೆ ನೀಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ವಿರುದ್ಧ ಸೋಮೊಟೊ ಕೇಸ್ ದಾಖಲಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಉಡುಪಿ ಗ್ರಾಮಾಂತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶ್ರೀ ಗೌತಮ್ ಅಗ್ರಹಾರ ಆಗ್ರಹಿಸಿದ್ದಾರೆ.

ಹಿಂದೂಗಳ ಪಾಲಿನ ಪವಿತ್ರ ಗೋಮಾತೆಯ ರುಂಡವನ್ನು ಎಸೆದು ಹೋದ ಅತ್ಯಂತ ಭಾವನಾತ್ಮಕ ಘಟನೆಯಿಂದ ಆತಂಕಕ್ಕೀಡಾಗಿರುವ ಜನತೆಯ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಉದ್ದೇಶದಿಂದ ಇಂತಹ ಪ್ರಚೋದನಕಾರಿ ಹೇಳಿಕೆಯನ್ನು ನೀಡುವ ಮತಾಂಧ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು.

ಮೊನ್ನೆ ಹಿಂದೂ ಮುಖಂಡ ಶರಣ್ ಪಂಪ್ವೆಲ್ ಹೇಳಿಕೆ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಿಸಿದ ಪೊಲೀಸ್ ಇಲಾಖೆ, ರಿಯಾಜ್ ಕಡಂಬು ವಿರುದ್ಧವೂ ತಕ್ಷಣ ಕೇಸು ದಾಖಲಿಸಬೇಕು.

ಪೊಲೀಸ್ ಇಲಾಖೆ ಕೇಸು ದಾಖಲು ಮಾಡದೇ ಇದ್ದಲ್ಲಿ ಉಡುಪಿ ಗ್ರಾಮಾಂತರ ಬಿಜೆಪಿ ವತಿಯಿಂದ ಹೋರಾಟದ ಎಚ್ಚರಿಕೆ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here