ಬಂಟ್ವಾಳ: ಕೆಸರಿನ ಗದ್ದೆಯಲ್ಲಿ ಕ್ರೀಡಾಕೂಟ ಮತ್ತಿತರರ ವಿನೂತನ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ಯುವ ಪೀಳಿಗೆಗೆ ತುಳುನಾಡಿನ ಕೃಷಿ ಪದ್ಧತಿ ಪ್ರಾಮುಖ್ಯತೆ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಗತಿಪರ ಕೃಷಿಕ ರಾಮಕೃಷ್ಣ ನಾಯಕ್ ಕರ್ಪೆ ಕಿನ್ನಾಜೆ ಹೇಳಿದ್ದಾರೆ.
ಇಲ್ಲಿನ ಕೊಯಿಲ ಗ್ರಾಮದ ಬದನಡಿ ಷಣ್ಮುಖ ಕಲಾ ತಂಡದ ವತಿಯಿಂದ ತಾರಿಪಡ್ಪು ಕಂಬಳದಡ್ಡ ಕೆಸರು ಗದ್ದೆಯಲ್ಲಿ ಭಾನುವಾರ ಏರ್ಪಡಿಸಿದ್ದ ‘ಊರುದ ಗೌಜಿ’ ‘ಗೊಬ್ಬುದ ಕಲ, ಬಾರ್ನೆದ ತಲ’ ಕಾರ್ಯಕ್ರಮ ದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸ್ಥಳೀಯ ಪ್ರಗತಿಪರ ಕೃಷಿಕ ಬಾಬು ಮಡಿವಾಳ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ದೈವಪಾತ್ರಿ ಉಮಾನಾಥ ಸಪಲ್ಯ ಬೆಳ್ಳೂರು, ನಿವೃತ್ತ ಮುಖ್ಯಶಿಕ್ಷಕ ಸೋಮಪ್ಪ ಮಡಿವಾಳ, ನಾಟಿವೈದ್ಯೆ ಚೆಲುವಮ್ಮ ಶಾಂತಿಪಲ್ಕೆ ಇವರನ್ನು ಸನ್ಮಾನಿಸಿ, ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪತ್ರಕರ್ತ ಮೋಹನ್ ಕೆ. ಶ್ರೀಯಾನ್ ಮತ್ತು ಪ್ರದೀಪ್ ಪೂಜಾರಿ ಕುಕ್ಕಿಪಾಡಿ ಶುಭ ಹಾರೈಸಿದರು.
ಪ್ರಮುಖರಾದ ಆನಂದ ಟೈಲರ್, ಹರೀಶ ಶೆಟ್ಟಿ, ಶಾಂತ ಕುಮಾರ್ ಶೆಟ್ಟಿ, ಜೋಸೆಫ್ ವೇಗಸ್, ಹಾಸ್ಯ ಕಲಾವಿದ ಸತೀಶ್ ಕಲ್ಲಮುಂಡ್ಕೂರು, ಶರತ್ ಕುಮಾರ್ ಕೊಯಿಲ, ಕೊರಗಪ್ಪ ಪೂಜಾರಿ ಕೊಯಿಲ, ಕಾಂತಪ್ಪ ಪೂಜಾರಿ ಬಾರ್ಜರ್, ಬಿ. ದಯಾನಂದ ಸಪಲ್ಯ, ಸಂದೇಶ ಕೊಯಿಲ, ಮಹಿಳಾ ಘಟಕ ಅಧ್ಯಕ್ಷೆ ಶಾಂತ ಕೈತ್ರೋಡಿ, ಕಾರ್ಯದರ್ಶಿ ಸುಚಿತ್ರ ರಮೇಶ್ ಮತ್ತಿತರರು ಇದ್ದರು.
ಷಣ್ಮುಖ ಕಲಾ ತಂಡದ ಅಧ್ಯಕ್ಷ ರವೀಂದ್ರ ಪೂಜಾರಿ ಸ್ವಾಗತಿಸಿ, ರಕ್ಷಿತ್ ಅಂತರ ವಂದಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.