ಹೆಬ್ರಿ : ಶ್ರೀ ಅನಂತಪದ್ಮನಾಭ ಆಟೋರಿಕ್ಷಾ ಚಾಲಕ ಮಾಲಕರ ಸಂಘ (ರಿ.) ಹೆಬ್ರಿ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘ ಹೆಬ್ರಿ, ಶ್ರೀ ಮಹಾಗಣಪತಿ ಆಟೋರಿಕ್ಷಾ ಚಾಲಕ ಮಾಲಕರ ಸಂಘ ಮುದ್ರಾಡಿ, ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಮುನಿಯಾಲು ಹೆಬ್ರಿ, ಮಾಲಕರು ಮತ್ತು ಸಿಬ್ಬಂದಿ ವರ್ಗ ರೈತಸೇವಾ ಗ್ರಾಮೋದ್ಯೋಗ ಕನ್ಯಾನ ಹೆಬ್ರಿ, ಶ್ರೀ ಭರತ್ ಕುಮಾರ್ ಶೆಟ್ಟಿ, ಮನು ಲಾ ಚೇಂಬರ್ ಹೆಬ್ರಿ , ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ, ಹೆಬ್ರಿ ಕಣ್ಣಿನ ಆಸ್ಪತ್ರೆ ಸ್ಪಟಿಕ ಪ್ಲಾಜಾ ಕುಚ್ಚೂರು ರಸ್ತೆ ಹೆಬ್ರಿ ಮತ್ತು ಸುಪ್ರೀಮ್ ಡಯಗ್ನೋಸ್ಟಿಕ್ ಅಂಬಲಪಾಡಿ ಉಡುಪಿ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣೆ ಬಿಪಿ ಹಾಗೂ ಮಧುಮೇಹ ತಪಾಸಣೆ ಶಿಬಿರವು ಜು. 6ರಂದು ಹೆಬ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯರಾದ ಗಂಗಾಧರ ರಾವ್ ರವರು ಶ್ರೀ ಅನಂತಪದ್ಮನಾಭ ಆಟೋ ರಿಕ್ಷಾ ಚಾಲಕ ಮಾಲಕರ ಸಂಘವು ಇತರ ಸಂಘ ಸಂಸ್ಥೆಗಳ ಜೊತೆಗೆ ಸೇರಿ ಪ್ರತಿವರ್ಷವೂ ಜನರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಈ ವರ್ಷ ಕೂಡ ರಕ್ತದಾನ ಶಿಬಿರವನ್ನು ನಡೆಸಿ ರಕ್ತದ ಅವಶ್ಯಕತೆ ಇರುವ ಹಲವಾರು ಜನರಿಗೆ ನೇರವಾಗುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಅನಂತಪದ್ಮನಾಭ ರಿಕ್ಷಾ ಚಾಲಕ ಮಾಲಕರ ಸಂಘ(ರಿ ) ಹೆಬ್ರಿ, ಇದರ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಕುಚ್ಚೂರು ಇವರು ಮಾತನಾಡಿ
ಸ್ಥಾಪಕ ಅಧ್ಯಕ್ಷರಾದ ಹೆಬ್ರಿಯ ಸುರೇಶ್ ಭಂಡಾರಿಯವರು ಸ್ಥಾಪಿಸಿದ ಶ್ರೀ ಅನಂತಪದ್ಮನಾಭ ಆಟೋ ಚಾಲಕ ಮಾಲಕರ ಸಂಘವು ಹಲವಾರು ಏಳು ಬೀಳುಗಳನ್ನು ಕಂಡು ಇದೀಗ ಸದೃಢ ಸಂಘವಾಗಿ ಬೆಳೆದು ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಸದಸ್ಯರಿಗೆ ಅಪಘಾತ ಹಾಗೂ ಮರಣ ಹೊಂದಿದಲ್ಲಿ ಧನ ಸಹಾಯ ನೀಡುವುದರ ಮೂಲಕ ರಾಜ್ಯದಲ್ಲೇ ಉತ್ತಮವಾದ ಮಾದರಿ ಸಂಘವೆಂದು ಹೆಸರು ಪಡೆದಿದೆ, ಸತತ 5 ವರ್ಷಗಳಿಂದ ಹೆಬ್ರಿಯ ಭಾಗದಲ್ಲಿ ರಕ್ತದಾನ ಶಿಬಿರ ನಡೆಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಆಟೋ ಚಾಲಕ ಮಾಲಕ ಸಂಘಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಲಾಗಿವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಬ್ರಿ ಹೆಲ್ತ್ ಕೇರ್ ಸೆಂಟರ್ ನ ಡಾ. ಉತ್ಸವ ಸಿ. ಶೆಟ್ಟಿ, ಶ್ರೀ ಅನಂತಪದ್ಮನಾಭ ಆಟೋ ಚಾಲಕ ಮಾಲಕರ ಸಂಘದ ಗೌರವ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ನಾಯಕ್, ಸಂಘದ ಕಾನೂನು ಸಲಹೆಗಾರರಾದ ವಕೀಲರಾದ ಭರತ್ ಕುಮಾರ್ ಶೆಟ್ಟಿ, ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿಯ ವೈದ್ಯರಾದ ಶ್ರೀಮತಿ ಡಾ. ವೀಣಾ ಕುಮಾರಿ, ಶ್ರೀ ಮಹಾಗಣಪತಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ(ರಿ) ಮುದ್ರಾಡಿಯ ಅಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್ ಹಾಗೂ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ (ರಿ) ಮುನಿಯಾಲಿನ ಅಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್ ಮತ್ತು ಸಂಘದ ರಿಕ್ಷಾ ಚಾಲಕ ಮಾಲಕರು ಮತ್ತು ಇತರರು ಉಪಸ್ಥಿತರಿದ್ದರು.