ಮಂಗಳೂರು: ಅಖಿಲ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಮೇ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರು ತೊಕ್ಕೊಟ್ಟುವಿನ ಹಂಶಿತಾ ಉತ್ತೀರ್ಣರಾಗಿದ್ದಾರೆ.
ಇವರು ಮಂಗಳೂರು ಬಿಜೈನ ಲೆಕ್ಕ ಪರಿಶೋಧಕ ಶಾಂತರಾಮ ಶೆಟ್ಟಿ ಅಂಡ್ ಕೋ ಬಿಜೈ ಇವರಲ್ಲಿ ತರಬೇತಿ ಪಡೆದಿದ್ದಾರೆ.
ಸಿಎ ಅಂತಿಮ ಪರೀಕ್ಷೆಯಲ್ಲಿ ತನ್ನ ಪ್ರಥಮ ಪ್ರಯತ್ನದಲ್ಲೇ ಉತೀರ್ಣರಾಗಿರುವ ಹಂಶಿತಾ ಮಂಗಳೂರು ತೊಕ್ಕೊಟ್ಟು ಅಂಬಿಕಾ ರೋಡ್ ನಿವಾಸಿ, ರಂಗೋಲಿ ಕ್ಯಾಟ್ಟ್ರೆಸ್ ಮಾಲಕರಾದ ಹರೀಶ್ ಕುಮಾರ್-ಲತಾ ಹರೀಶ್ ದಂಪತಿಯ ಪುತ್ರಿ.