ಮೂಡುಬಿದಿರೆ: ರಾಷ್ಟ್ರಮಟ್ಟದಲ್ಲಿ ನಡೆಯುವ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ನ 26 ವಿದ್ಯಾರ್ಥಿಗಳು ಉತ್ತೀರ್ಣನರಾಗಿ ಅತ್ಯಪೂರ್ವ ಸಾಧನೆಯನ್ನು ರಾಜ್ಯಮಟ್ಟದಲ್ಲಿ ದಾಖಲಿಸಿದ್ದಾರೆ. ರಾಜ್ಯಮಟ್ಟದ ಯಾವುದೇ ಸಂಸ್ಥೆಯಲ್ಲಿಯೂ ಕೂಡ ಇಷ್ಟು ಅತ್ಯಪೂರ್ವದ ಸಾಧನೆಯನ್ನು ಯಾವುದೇ ಸಂಸ್ಥೆ ದಾಖಲಿಸದೆ ಫಲಿತಾಂಶ ದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ಸಂಸ್ಥೆ ಮಿಂಚುತ್ತಿರುವುದು ಮತ್ತೊಮ್ಮೆ ಸಾಬೀತುಗೊಂಡಿದೆ.
2025 ನೇ ಮೇ ತಿಂಗಳಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಸ್ನೇಹಲ್ ಜೆ, ವಿಲ್ಸನ್, ಈಶ್ವರ್, ಸುಹಾನ್ ಶಿವಯೋಗಿ, ದೀಕ್ಷಾ, ಪವನ್ ಕುಮಾರ್, ಗುರುಪ್ರಸಾದ್ ಹೆಗ್ಡೆ, ನಿಶಾ ಶೆಟ್ಟಿ, ನವೀನ್ ಪೈ, ಶ್ರೀ ಸಮರ್ಥ, ಸುಪ್ರಿಯ, ಭಾಸ್ಕರ್ ಪೂಜಾರಿ, ಉಮಾಂಗ ಇನಾನಿ, ವೆಂಕಟೇಶ್ ಪ್ರಸಾದ್, ಸೃಷ್ಟಿ ಪ್ರಭು, ಮಧುರಾ, ಗೌತಮಿ, ರಕ್ಷಾ ಶೆಟ್ಟಿ, ಸಂಗೀತ ಹೆಗ್ಡೆ, ಸೋಮನಾಥ್, ಸ್ವಾತಿ, ಚೈತನ್ಯ, ಅದಿತ್ಯಾ ರಾವ್, ಕೌಶಿಕ್ ಯು ಪಿ, ಅಕ್ಷತ್ ಕೆ, ಮತ್ತು ಚಿನ್ಮಯ ಯುಎನ್ ಹೀಗೆ ಒಟ್ಟು 26 ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಆಳ್ವಾಸ್ ನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಸಾಬೀತು ಮಾಡಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಕಳೆದ ಮೂರು ವರ್ಷಗಳಲ್ಲಿ 115 ವಿದ್ಯಾರ್ಥಿಗಳು ಸಿಎ ಅಂತಿಮ ಪರೀಕ್ಷೆಯನ್ನು ಉತ್ತೀರ್ಣರಾಗುವ ಮೂಲಕ ಆಳ್ವಾಸ್ ನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಭೂತರಾಗಿದ್ದಾರೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ ಅವರು ಮೆಚ್ಚುಗೆಯ ನುಡಿಯನ್ನು , ಅಭಿನಂದನೆಗಳನ್ನು ವಿದ್ಯಾರ್ಥಿಗಳಿಗೆ ಸಲ್ಲಿಸಿರುತ್ತಾರೆ. ವಿದ್ಯಾರ್ಥಿಗಳು ಈ ಅತ್ಯಪೂರ್ವಾದ ಸಾಧನೆಯನ್ನು ಮಾಡುವುದಕ್ಕೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವರ್ಗ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗ ಸಾಕಷ್ಟು ದುಡಿದಿದೆ ಎಂದು ಅಧ್ಯಕ್ಷರು ಅವರೆಲ್ಲರನ್ನೂ ಅಭಿನಂದಿಸಿದ್ದಾರೆ. ಜುಲೈ 7ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪದವಿ ಪ್ರಾಂಶುಪಾಲ ಡಾ. ಕುರಿಯನ್, ಪದವಿ ಪೂರ್ವ ಪ್ರಾಂಶುಪಾಲ ಮಹಮ್ಮದ್ ಸದಾಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ ಡಿ ಮತ್ತು ಸಿಎ ಸಂಯೋಜಕರು ಹಾಜರಿದ್ದರು.