ಶ್ರೀ ದಿಗಂಬರ ಜೈನ ಮಠದಲ್ಲಿ ಅಭಿಷೇಕ ಪೂಜೆಯೊಂದಿಗೆ ಕಲಶ ಸ್ಥಾಪನೆ

0
21

ಪ.ಪೂ 108 ಗುಲಾಬ್ ಭೂಷಣ ಮುನಿ ಮಹಾರಾಜ್ ಹಾಗೂ ಸ್ವಸ್ತಿಶ್ರೀ ಭಟ್ಟಾರಕ ರಿಂದ 25ನೇ ವರ್ಷ ದ ಚಾತುರ್ಮಾಸ ಕಲಶ ಸ್ಥಾಪನೆ ಪಪೂ 108 ಆಚಾರ್ಯ ಗುಲಾಬ್ ಭೂಷಣ ಮುನಿ ಮಹಾರಾಜ್ ಶ್ರೀ ಮಠ ದ ತ್ಯಾಗಿ ನಿವಾಸ ಶಾಂತಿ ಭವನ ದಲ್ಲಿ ಈ ಬಾರಿಯ ಚಾ ತು ರ್ಮಾಸ ಆಚರಿಸಲು ವಾಸ್ತವ್ಯ ವಿದ್ದು ಇಂದು 09.07.2025 ಬುಧವಾರ ಮಧ್ಯಾಹ್ನ ಶ್ರೀ ದಿಗಂಬರ ಜೈನ ಮಠದಲ್ಲಿ ಅಭಿಷೇಕ ಪೂಜೆಯೊಂದಿಗೆ ಕಲಶ ಸ್ಥಾಪನೆ ವಿಧಿ ವಿಧಾನ .

ಮೂಡುಬಿದಿರೆ ಜೈನಮಠದ ಜಗದ್ಗುರು ಡಾ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಮಾರ್ಗದರ್ಶನ ಉಪಸ್ಥಿತಿಯಲ್ಲಿ ನೆರವೇರಲಿದೆ ಉಭಯತ್ರರರಿಗೆ ಇದು ಚಾತುರ್ಮಾಸ ರಜತ ಮಹೋತ್ಸವವಾಗಿದ್ದು ಮುನಿಗಳು ದೀಪಾವಳಿ ಪರ್ಯಂತ ಕಠಿಣ ವ್ರತ ನಿಯಮ ಗಳೊಂದಿಗೆ ಆಚರಣೆ ಮಾಡಲಿರುದು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಸ್ಥಾನೀಯ ಜೈನ ಭಾಂದವರು ಉತ್ಸಾಹದಿಂದ ನಾಳೆಯಿಂದ ವಿವಿಧ ಪೂಜೆ ಆರಾಧನೆ ಗಳೊಂದಿಗೆ ಕಾರ್ಯಕ್ರಮ ಸಂಪನ್ನ ಗೊಳಿಸಲು ತೊಡಗಿಸಿ ಕೊಂಡಿದ್ದಾರೆ.

ಸರ್ವರಿಗೂ ಮುಕ್ತ ಅವಕಾಶ ಇದ್ದು ಮಹಾವೀರ ಭವನದಲ್ಲಿ ಸಂಜೆ ಉಪಹಾರ ವ್ಯೆವಸ್ಥೆ ಕಲ್ಪಿಸಲಾಗಿದೆ. ನಿತ್ಯ ಸ್ವಾಧ್ಯಯ ಪ್ರತಿ ರವಿವಾರ ಶ್ರೀ ಮಠದಲ್ಲಿ ಆರಾಧನೆ, ಪ್ರವಚನ ನೆರವೇರಲಿದೆ ಎಂದು ಶ್ರೀ ಜೈನ ಮಠದ ವ್ಯವಸ್ಥಾಪಕ ಸಂಜಯoತ್ ಕುಮಾರ್ ಶೆಟ್ಟಿ ತಿಳಿಸಿದರು.

LEAVE A REPLY

Please enter your comment!
Please enter your name here