ಮಂಜೇಶ್ವರ: ಮಂಜೇಶ್ವರ ಪಂಚಾಯತ್ ಶಾಖೆಯ ಸಕ್ರೀಯ ಕಾರ್ಯಕರ್ತ, ತಾಲೂಕು ಕುಲಾಲ ಸಂಘದ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆ ಗಳಲ್ಲಿ ಸಕ್ರೀಯವಾಗಿದ್ದ ಯುವ ನಾಯಕ ಸೋಮಶೇಖರ ಬಡಾಜೆ ಅವರು ಜು. ೮ರಂದು ನಿಧನರಾದರು.
ಕುಂಭವಾಣಿ ತ್ರೈಮಾಸಿಕ ಪತ್ರಿಕೆಯ ಮಹತ್ತರ ಜವಾಬ್ದಾರಿ ನಿರ್ವಹಿಸಿದ್ದ ಇವರು ಕಾಸರಗೋಡು ಮತ್ತು ದ. ಕ ಜಿಲ್ಲೆಯಲ್ಲಿ LIC ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಕಾಸರಗೋಡು ಜಿಲ್ಲೆಯ ಸಮಸ್ತ ಕುಲಾಲ ಬಾಂಧವರ ಪರವಾಗಿ ಜಿಲ್ಲಾ ಸಂಘವು ತೀವ್ರ ಸಂತಾಪ ವ್ಯಕ್ತ ಪಡಿಸಿದೆ.