ಅಪಾರ್ಟ್‌ಮೆಂಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿಯ ಶವ ಪತ್ತೆ

0
21

ಪಾಕಿಸ್ತಾನಿ (Pakistan) ಮನರಂಜನಾ ಉದ್ಯಮದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ . 32 ವರ್ಷದ ಯುವ ನಟಿ ಹುಮೈರಾ ಅಸ್ಗರ್ ನಿಧನರಾಗಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಹುಮೈರಾ 2 ವಾರಗಳ ಹಿಂದೆ ನಿಧನರಾಗಿದ್ದರು ಎನ್ನಲಾಗಿದೆ. ಆದರೆ ಸುತ್ತಮುತ್ತಲಿನ ಜನರಿಗೆ ಅದರ ಸುಳಿವು ಕೂಡ ಸಿಗಲಿಲ್ಲ. ಪೊಲೀಸರು ನಟಿಯ ದೇಹವನ್ನು ಕೊಳೆತ ಸ್ಥಿತಿಯಲ್ಲಿ ಪತ್ತೆ ಮಾಡಿದ್ದಾರೆ. ಹುಮೈರಾ ಪಾಕಿಸ್ತಾನಿ ರಿಯಾಲಿಟಿ ಶೋ ‘ ತಮಾಷಾ ಘರ್ ‘ ಮತ್ತು ‘ ಜಲೈಬಿ ‘ ಚಿತ್ರಕ್ಕೆ ಹೆಸರುವಾಸಿಯಾಗಿದ್ದರು.

ಮಾಧ್ಯಮ ವರದಿಗಳ ಪ್ರಕಾರ , ಹುಮೈರಾ ಅಸ್ಗರ್ ಅಲಿ ಕರಾಚಿಯ ಇತ್ತೆಹಾದ್ ಕಮರ್ಷಿಯಲ್‌ನಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು . ಅದೇ ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವವೂ ಪತ್ತೆಯಾಗಿದೆ. ಜುಲೈ 8, ಮಂಗಳವಾರ ಹುಮೈರಾ ಸಾವನ್ನು ಪೊಲೀಸರು ದೃಢಪಡಿಸಿದರು . ಹುಮೈರಾ ಅವರ ವಯಸ್ಸು ಸುಮಾರು 30 ರಿಂದ 35 ವರ್ಷಗಳು ಎಂದು ಹೇಳಲಾಗುತ್ತದೆ. ಅವರು ಏಳು ವರ್ಷಗಳಿಂದ ಕರಾಚಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು.

ಹುಮೈರಾ ಅವರ ಅಪಾರ್ಟ್‌ಮೆಂಟ್‌ನಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಕರೆಯಲಾಗಿದ್ದು , ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರದ ಡಾ . ಸುಮೈಯಾ ಅವರ ಮೇಲ್ವಿಚಾರಣೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ . ” ಶವವು ಬಹುತೇಕ ಕೊಳೆಯುವ ಅಂತಿಮ ಹಂತದಲ್ಲಿತ್ತು ” ಎಂದು ವೈದ್ಯರು ಮಂಗಳವಾರ ಹೇಳಿದರು .​

LEAVE A REPLY

Please enter your comment!
Please enter your name here