ನರಿಂಗಾನ ಕಂಬಳೋತ್ಸವ: ಜು. 13ರಂದು ಕುದಿಕಂಬಳ ಮುಹೂರ್ತ

0
118


ಮಂಗಳೂರು, (ಉಳ್ಳಾಲ): 2025-26ನೇ ಸಾಲಿನ ನರಿಂಗಾನ ಕಂಬಳೋತ್ಸವಕ್ಕೆ ಪೂರ್ವಭಾವಿಯಾಗಿ ಜು.13ರಂದು ಬೆಳಗ್ಗೆ 7.30ಕ್ಕೆ ಕುದಿಕಂಬಳ ಮುಹೂರ್ತ ನಡೆಸಲು ನರಿಂಗಾನ ಕಂಬಳ ಸಮಿತಿ ಅಧ್ಯಕ್ಷರಾಗಿರುವ ಯು.ಟಿ. ಖಾದರ್ ಅವರ ಆದೇಶದ ಮೇರೆಗೆ ನರಿಂಗಾನ ಕಂಬಳ ಸಮಿತಿ ತೀರ್ಮಾನಿಸಿದೆ.

ರಾಜ್ಯ ವಿಧಾನ ಸಭಾಧ್ಯಕ್ಷರು, ಮಂಗಳೂರು ಕ್ಷೇತ್ರ ಶಾಸಕರಾಗಿರುವ ಯು. ಟಿ. ಖಾದರ್ ಅವರ ಅಧ್ಯಕ್ಷತೆಯ ನರಿಂಗಾನ ಕಂಬಳ ಸಮಿತಿ ಹಾಗೂ ನರಿಂಗಾನ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ಕಳೆದ ಮೂರು ವರ್ಷ ನಡೆದಂತಹ ಲವ-ಕುಶ ಜೋಡುಕರೆ ಕಂಬಳ ಕಿರು ಅವಧಿಯಲ್ಲೇ ಹಲವು ವಿಶೇಷತೆಗಳ ಮೂಲಕ ದಾಖಲಾರ್ಹ ಯಶಸ್ಸು ಬರೆದಿದೆ ಎಂಬುದು ತಮಗೆಲ್ಲರಿಗೂ ತಿಳಿದಿರುವ ಸಂಗತಿ. ಈ ಯಶಸ್ಸಿಗೆ ಕಂಬಳಾಭಿಮಾನಿಗಳಾದ ತಮ್ಮೆಲ್ಲರಿಂದ ನಿತ್ಯ ನಿರಂತರವಾಗಿ ಸಿಕ್ಕ ಪ್ರೋತ್ಸಾಹ ಕಾರಣವಾಗಿದೆ ಎಂಬುದು ಉಲ್ಲೇಖನೀಯ.
ಹಾಗಾಗಿ ನಮ್ಮ ಕಂಬಳಕ್ಕೆ ಅಭೂತಪೂರ್ವ ಸಹಕಾರ ಕೊಡುತ್ತಾ ಬಂದಿರುವ ಕಂಬಳಕೋಣದ ಯಜಮಾನರುಗಳು, ಸಮಸ್ತ ಕಂಬಳ ಅಭಿಮಾನಿಗಳು ಈ ಕುದಿಕಂಬಳ ಮುಹೂರ್ತ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಬೇಕಾಗಿ ಸಮಿತಿ ವಿನಂತಿಸಿದೆ. ಮುಹೂರ್ತಕ್ಕೆ ಮೆರಗು ನೀಡಲು ಕಂಬಳಕೋಣದ ಯಜಮಾನರುಗಳು ತಮ್ಮ ತಮ್ಮ ಕೋಣಗಳ ಜೊತೆಯಲ್ಲಿ ಪಾಲ್ಗೊಳ್ಳುವ ಮೂಲಕ ಕುದಿಕಂಬಳ ಮುಹೂರ್ತ ಚಂದಗಾಣಿಸಬೇಕಾಗಿ ತಮ್ಮಲ್ಲಿ ನಮ್ಮ ಆಶಯ ವ್ಯಕ್ತಪಡಿಸಿದೆ.

ಕಂಬಳ ಕೋಣಗಳಿಗೆ ದೀರ್ಘ ತರಬೇತಿ ದೊರಕುವಂತಾಗಲಿ

ನರಿಂಗಾನ ಕಂಬಳ ಸಮಿತಿ ಕಂಬಳ ಕೋಣಗಳಿಗೆ ದೀರ್ಘ ತರಬೇತಿ ದೊರಕುವಂತಾಗಲಿ ಎಂಬ ಕಾರಣದಿಂದ ಕಂಬಳ ದಿನ ನಿಗದಿ ಆಗದಿದ್ದರೂ ಸಂಭವನೀಯ ತಿಂಗಳ ಆಧಾರದಲ್ಲಿ ಸುಮಾರು ಆರು ತಿಂಗಳ ಮುಂಚಿತವಾಗಿ ಕುದಿಕಂಬಳ ಮುಹೂರ್ತ ನಡೆಸುತ್ತಿದೆ. ಕೋಣದ ಯಜಮಾನರುಗಳಿಗೆ ಸಂತೃಪ್ತಿ ಆಗುವಂತೆ ಪ್ರತಿ ಭಾನುವಾರ ಕಂಬಳಗದ್ದೆಯಲ್ಲಿ ಕೋಣಗಳನ್ನು ಓಡಿಸಲು ಬೇಕಾದಷ್ಟು ನೀರು ಸರಬರಾಜು ವ್ಯವಸ್ಥೆ ಮಾಡುತ್ತೇವೆ. ಹಾಗಾಗಿ ಈ ಸುವರ್ಣ ಅವಕಾಶವನ್ನು ಎಲ್ಲ ಕೋಣಗಳ ಯಜಮಾನರು ಸದುಪಯೋಗಪಡಿಸಿಕೊಳ್ಳಬೇಕಾಗಿ ನರಿಂಗಾನ ಕಂಬಳ ಸಮಿತಿಯ ಕಾರ್ಯಾಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿರುವ ಪ್ರಶಾಂತ್ ಕಾಜವ ಮಿತ್ತಕೋಡಿ ಹಾಗೂ ಪ್ರಧಾನ ಕಾರ್ಯದರ್ಶಿ ನವಾಜ್ ನರಿಂಗಾನ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here