ಬೆಳ್ತಂಗಡಿಯ ಚಾರ್ಮಾಡಿ ಮೂಲದ ಜಲಜ ಪೂಜಾರಿ ಉಡುಪಿಗೆ ಆಗಮಿಸಿದ್ದರು. ಇವರು ಪ್ರಸ್ತುತ ತುಳುವೆರೆಂಕುಲು ಸಂಘದ ಅಧ್ಯಕ್ಷರಾಗಿ, ಬಿಲ್ಲವ ಸಂಘ ಬೆಂಗಳೂರು ಇದರ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ, ಹಾಗೂ ಬಿ ಎಸ್ ಎನ್ ಡಿ ಪಿ ಸಂಘದ ರಾಜ್ಯ ಕ್ರೀಡಾ ಕಾರ್ಯದರ್ಶಿಯಾದ ಇವರನ್ನು ಉಡುಪಿ ಘಟಕದ ಬಿ ಎಸ್ ಏನ್ ಡಿಪಿಯ ಜಿಲ್ಲಾಧ್ಯಕ್ಷರಾದ ಶ್ರೀಧರ್ ಅಮೀನ್ ಮಣಿಪುರ ಇವರು ಗೌರವಿಸಿದರು. ಜೊತೆಗೆ ಬಿ ಎಸ್ ಎನ್ ಡಿ ಪಿ ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ದೀಪ ನಾಯ್ಕ್ ,ಸದಸ್ಯರಾದ ಗಣೇಶ್ ಕುಮಾರ್ ಸಂಪಿಗೆ ನಗರ ಮತ್ತಿತರರು ಉಪಸ್ಥಿತರಿದ್ದರು.

