ಮೂಡುಬಿದಿರೆ: ಆರೋಗ್ಯ ಕ್ಷೇತ್ರದಲ್ಲಿ ಮಾನಸಿಕ ರೋಗಗಳ ಚಿಕಿತ್ಸೆಯ ವೈದ್ಯರು ಹಾಗೂ ವ್ಯಸನಮುಕ್ತ ಕೇಂದ್ರಗಳ ಅಗತ್ಯ ಬಹಳಷ್ಟಿದೆ. ನಮ್ಮ ದೇಶದಲ್ಲಿನ ಪ್ರತೀ ಜಿಲ್ಲೆಯಲ್ಲಿ 2 ಲಕ್ಷ ಜನ ಮದ್ಯವ್ಯಸನದ ಸಮಸ್ಯೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಬಳಲುತ್ತಿದ್ದಾರೆ. ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ವ್ಯವಸ್ಥೆ ನಮ್ಮಲ್ಲಿಲ್ಲ ಎಂದು ಉಡುಪಿಯ ಡಾ.ಎ.ವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ ಭಂಡಾರಿ ಹೇಳಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯಿAದ ಮಿಜಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಗಳನ್ನು ನೀಡುವ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ನಂತರದ ದಿನಗಳಲ್ಲಿ ಜನರು ಹೃದಯ ಸಮಸ್ಯೆಗೆ ಹೆಚ್ಚಿನ ಗಮನಕೊಡುತ್ತಿದ್ದು, ವಾಸ್ತವದಲ್ಲಿ ಮಾನಸಿಕ ರೋಗದಿಂದ ಬಳಲುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಕ್ಷೇತ್ರದಲ್ಲಿನ ವೃತ್ತಿಪರತೆ ಮಾತ್ರ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಲ್ಲದು. ಆಳ್ವಾಸ್ ಶಿಕ್ಷಣ ಸಂಸ್ಥೆಯಿAದ ಅರಂಭಗೊಂಡಿರುವ ನೂತನ ಮಾನಸಿಕ ಆರೋಗ್ಯ ಆಸ್ಪತ್ರೆ, ವೈದ್ಯಕೀಯ ಸೇವೆಯ ನೆಲೆಯಲ್ಲಿ ಶ್ರೇಷ್ಠ ಕೊಡುಗೆಯನ್ನು ನೀಡುವ ಆಸ್ಪತ್ರೆಯಾಗಿ ಮೂಡಿಬರಲಿ ಎಂದು ಹಾರೈಸಿದರು.
ಬೆಳ್ತಂಗಡಿಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, 1992-1997ರವರೆಗೆ ಮದ್ಯವ್ಯಸನ ಹಾಗೂ ದುಶ್ಚಟಗಳಿಂದ ಬೆಳ್ತಂಗಡಿ ಭಾಗದ ಜನರನ್ನು ಮುಕ್ತಗೊಳಿಸಲು ಡಾ.ಎಂ ಮೋಹನ ಆಳ್ವರಾಧಿಯಾಗಿ ಹಲವರು ಪಟ್ಟ ಶ್ರಮ ಹಾಗೂ ಹೋರಾಟದಿಂದ ಜೆ.ಎಚ್ ಪಟೇಲರ ಕಾಲದಲ್ಲಿ ಬೆಳ್ತಂಗಡಿ ತಾಲೂಕು ಕರ್ನಾಟಕದ ಭೂಪಟದಲ್ಲಿ ಮೊಟ್ಟ ಮೊದಲ ಪಾನಮುಕ್ತ ತಾಲೂಕೆಂದು ಘೋಷಣೆಯಾಯಿತು. ಇಂತಹ ಮಧ್ಯಪಾನದ ಕುರಿತು ಜನಜಾಗೃತಿ ಹಾಗೂ ಹೋರಾಟದ ಹಿನ್ನಲೆಯಿಂದ ಬಂದಂತಹ ಡಾ ಎಂ ಮೋಹನ ಆಳ್ವರ ನೇತೃತ್ವದಲ್ಲಿ ಮೂಡುಬಿದಿರೆ ಭಾಗದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯಾಗುತ್ತಿರುವುದು ಸಂತೋಷದ ವಿಷಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಮಾತನಾಡಿ, ಸಮಾಜದ ಪರಿಕಲ್ಪನೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೆಲಸ ನಿರ್ವಹಿಸುತ್ತಿದ್ದು, ಈ ನೆಲೆಯಲ್ಲಿ ನೂತನವಾಗಿ ಆರಂಭಗೊAಡ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಆಸ್ಪತ್ರೆಯು ಈ ಧ್ಯೇಯೋದ್ದೇಶವನ್ನು ಇನ್ನಷ್ಟು ಸಕಾರಗೊಳಿಸಲಿದೆ ಎಂದರು.
ಮಂಗಳೂರಿನ ಮನೋವೈದ್ಯ ಡಾ.ಕ್ಯಾರೋಲಿನ್ ಡಿಸೋಜ, ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ ಆಳ್ವ, ಡಾ.ಹನ, ಡಾ.ಗ್ರೀಷ್ಮಾ ಉಪಸ್ಥಿತರಿದ್ದರು.
ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿ, ಪುನರ್ಜನ್ಮದ ಆಪ್ತ ಸಮಾಲೋಚಕಿ ಸುಮನ್ ಪಿಂಟೋ ವಂದಿಸಿ, ಪ್ರೋ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
ಆಳ್ವಾಸ್ ಪುನರ್ಜನ್ಮದ ವಿಶೇಷತೆ: ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ನಿರ್ಮಿಸಲಾಗಿರುವ ನೂತನ 50 ಹಾಸಿಗೆಯ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಆಸ್ಪತ್ರೆಯಲ್ಲಿ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಗಳು ಲಭ್ಯವಿವೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಪ್ರತ್ಯೇಕ ವಿಭಾಗವಿರುವುದು ವಿಶೇಷ. ಅಲೋಪಥಿ, ನ್ಯಾಚುರೋಪಥಿ, ಆಯುರ್ವೇದ, ಪಿಸಿಯೋತೆರೆಪಿ, ಮನೋವೈದ್ಯ ಶಾಸ್ತç ಹಾಗೂ ಯೋಗ ಧ್ಯಾನ, ಮಾನಸಿಕ ಹಾಗೂ ಸಾಮಾಜಿಕ ಶಿಕ್ಷಣದೊಂದಿಗೆ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಯ ವಿಧಾನದೊಂದಿಗೆ ಕಾರ‍್ಯನಿರ್ವಹಿಸುವ ಆಸ್ಪತ್ರೆ ಇದಾಗಿದೆ.