ಅಳದಂಗಡಿ: ಅಳದಂಗಡಿಯಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಪ್ರತಿಷ್ಠಾನದ ಕಚೇರಿ, ಸೇವಾ ಪ್ರತಿಷ್ಠಾನ ಉದ್ಘಾಟನೆ, ಕವಿಗೋಷ್ಠಿ, ಯಕ್ಷಗಾನ ತರಬೇತಿ ತರಗತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಐದು ಮಂದಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕಿನ ಹಿರಿಯ ಪತ್ರಕರ್ತರಾದ ನಾಭಿರಾಜ್. ಪೂವಣಿ, ಬಿ.ಎಸ್.ಕುಲಾಲ್, ಮನೋಹರ್ ಬಳಂಜ, ಜಾರಪ್ಪ ಪೂಜಾರಿ ಬೆಳಾಲು ಹಾಗೂ ಚೈತೇಶ್ ಇಳಂತಿಲ ಸನ್ಮಾನ ಸ್ವೀಕರಿಸಿದರು.