ಜಪ್ಪಿನಮೊಗರು ಶ್ರೀ ಗಣೇಶೋತ್ಸವ ದ ಸರ್ವ ಸದಸ್ಯರ ಸಭೆ

0
38

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ ಆಶ್ರಯ ದಲ್ಲಿ 17ನೇ ವರ್ಷದ ಜಪ್ಪಿನಮೊಗರು ಗಣೇಶೋತ್ಸವದ ಸರ್ವ ಸದಸ್ಯರ ಸಭೆ ಇದೇ ಅದಿತ್ಯವಾರ ಸಂಜೆ 5 ಲಯನ್ಸ್ ಸಭಾಂಗಣ ಕಂರ್ಬೆಟ್ಟುವಿನಲ್ಲಿ ಜರಗಿತು.

ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಕವಿತಾ ಗಂಗಾಧರ್ ರವರು ಸಭೆಗೆ ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಜೆ. ನಾಗೇಂದ್ರಕುಮಾರ್ ವಹಿಸಿದ್ದು, ಪ್ರಧಾನ ಕಾರ್ಯದರ್ಶಿ ಸುಭಾಷ್ ವಿ ಅಡಪರವರು ಸ್ವಾಗತಿಸಿದರು. ಸಭೆಯಲ್ಲಿ ಜಪ್ಪಿನಮೊಗರು ಗಣೇಶೋತ್ಸವದ ಆಚರಣೆಯ ಮೊದಲು ವಿವಿಧ ಕಾರ್ಯಕ್ರಮಗಳನ್ನು ಅಯೋಜಿಸುವ ಬಗ್ಗೆ ಚರ್ಚಿಸಲಾಯಿತು. ದಿನಾಂಕ:20-07-2025ನೇ ಆದಿತ್ಯವಾರದಂದು 10.00ರಿಂದ ಮದ್ಯಾಹ್ನದವರೆಗೆ “ಆಟಿದ ಒಂಜಿ ನೆಂಪು” ಎಂಬ ತುಳುನಾಡ ಸಂಸ್ಕೃತಿ ಹಾಗೂ ಆಹಾರ ಉತ್ಸವ ಕಾರ್ಯಕ್ರಮವನ್ನು ತುಳು ವಿದ್ವಾಂಸರು ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.

ದಿನಾಂಕ: 27.07.2025ನೇ ಆದಿತ್ಯ ವಾರದಂದು ಜಪ್ಪಿನಮೊಗರು ಶಾಲಾ ಸಭಾಂಗಣದಲ್ಲಿ ಬೆಳಿಗ್ಗೆ 9:30 ರಿಂದ ಮದ್ಯಾಹ್ನದವರೆಗೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ನಾಗುರಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಮತ್ತು ಲಯನ್ಸ್ ಕ್ಲಬ್ ಕುಡ್ಲ ಇದರ ಸಹಭಾಗಿತ್ವದಲ್ಲಿ ಉಚಿತ ನೇತ್ರಾ ತಪಸಾಣಾ ಶಿಬಿರ ನಡೆಸಲು ತೀರ್ಮಾನಿಸಲಾಯಿತು.

ದಿನಾಂಕ:10-08-2025ನೇ ಅದಿತ್ಯವಾರ ಬೆಳಿಗ್ಗೆ 9:00ರಿಂದ ಸಂಜೆಯವರೆಗೆ ಎರ್ಮಜಿಲ್ ಗುತ್ತು ಸಂಕಪ್ಪ ರೈಯವರ ಸ್ಥಳ ಜಪ್ಪಿನಮೊಗರು ಗಣೇಶ ಮಂಟಪ ಮೈದಾನದಲ್ಲಿ ಕ್ರೀಡಾ ಭಾರತಿ (ರಿ) ಮಂಗಳೂರು ಇದರ ಸಹಯೋಗದೊಂದಿಗೆ ಗ್ರಾಮೀಣ ಕ್ರೀಡಾಕೂಟ ನಡೆಸಲು ತೀರ್ಮನಿಸಲಾಯಿತು.

ಸಭೆಯಲ್ಲಿ ಸಮಿತಿಯ ಕಾರ್ಯನಿರ್ವಹಣಾ ಸಮಿತಿಗೆ ಸಮಿತಿಯ 15 ಸದಸ್ಯರ ಹೆಸರನ್ನು ನಾಮ ನಿರ್ದೇಶನ ಮಾಡಿ ಅಂಗೀಕರಿಸಲಾಯಿತು.

ವೇದಿಕೆಯಲ್ಲಿ ಕಾರ್ಯಾಧ್ಯಕ್ಷರುಗಳಾದ ಉದಯ ಕೊಟ್ಟಾರಿ ಬಜಾಲ್, ಲ| ಗಣೇಶ್ ಸಾಲ್ಯಾನ್, ಲ| ಗಣೇಶ್ ಶೆಟ್ಟಿ ಕಂರ್ಬುಕೆರೆ, ಮುಖ್ಯ ಕಾರ್ಯದರ್ಶಿ ಜಿ. ಬಾಲಕೃಷ್ಣ ಶೆಟ್ಟಿ ಕೋಶಾಧಿಕಾರಿ ಶೈಲೇಶ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಬರುವ ತಾ-26-08-2025ನೇ ಮಂಗಳವಾರದಿಂದ ತಾ|28-08-2025ನೇ ಗುರುವಾರದವರೆಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ಪೌರೋಹಿತ್ಯದಲ್ಲಿ ಶ್ರೀ ಗಣೇಶ ಮಂಟಪದಲ್ಲಿ 17ನೇ ವರ್ಷದ ಜಪ್ಪಿನಮೊಗರು ಗಣೇಶೋತ್ಸವವನ್ನು ಬಹಳ ವಿಜೃಂಬಣೆಯಿಂದ ನಡೆಸುವರೇ ತೀರ್ಮಾನಿಸಲಾಯ್ತು.

ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾದವರಿಗೆ ಕಾರ್ಯಾಧ್ಯಕ್ಷರಾದ ಸುಧಾಕರ್ ಜೆ.ರವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here