ಮೂಡುಬಿದಿರೆ: ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವಕಾಲೇಜಿನ ವಾಣಿಜ್ಯ ವಿಭಾಗದಉದ್ಘಾಟನಾಕಾರ್ಯಕ್ರಮಇತ್ತೀಚೆಗೆ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ಯಾಲಾಕ್ಸಿ ಸ್ಪೋರ್ಟ್್ಸ ವರ್ಲ್್ಡ ನ ಎ೦ಡಿ, ಜೆಸಿಐ ರಾಷ್ಟಿçÃಯತರಬೇತುದಾರರಾದ ಸದಾನ೦ದ ನಾವಡಮಾತನಾಡುತ್ತಾವಿದ್ಯಾರ್ಥಿಜೀವನದಲ್ಲಿ ನಾನು ತರಗತಿಯಲ್ಲಿಕಲಿತ ಪಾಠ ನನ್ನಜೀವನದಲ್ಲಿಉಪಯೋಗ ಆಗಲಿಲ್ಲ. ಆದರೆನಾನು ಭಾಗವಹಿಸಿದ ಪಠ್ಯೇತರ ಚಟುವಟಿಗಳು ನನ್ನ ವ್ಯಕ್ತಿತ್ವವನ್ನು ರೂಪಿಸಿತು. ಇದು ನನ್ನಉದ್ಯಮವನ್ನು ಬೆಳೆಸುವಲ್ಲಿ ಸಹಕಾರಿಯಾಯಿತು. ವಾಣಿಜ್ಯ ವಿಭಾಗದ ಚಟುವಟಿಕೆಗಳನ್ನು ಕ೦ಡಾಗ ಖ೦ಡಿತವಾಗಿ ನಿಮ್ಮ ಭವಿಷ್ಯದಲ್ಲಿಯಶಸ್ಸನ್ನು ಪಡೆಯಲುಇದು ಸಹಕಾರಿಯಾಗುತ್ತದೆ ಎ೦ದರು.
ಜಗತ್ತಿನ ಶೇಕಡಾ ತೊ೦ಭತ್ತೆöÊದರಷ್ಟು ಜನರುಉದ್ಯೋಗಿಅಥವಾ ಸ್ವಉದ್ಯೋಗಿಗಳಾಗಿರುತ್ತಾರೆ. ಉದ್ಯಮವನ್ನು ನಡೆಸಬೇಕಾದರೆರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಯಶಸ್ಸು ಕೇವಲ ರಿಸ್ಕ್ ತೆಗೆದುಕೊಳ್ಳುವವರ ಪಾಲಾಗಿದೆ ಎ೦ದರು. ಜೀವನದಲ್ಲಿ÷್ಲ ಪ್ರಗತಿಯನ್ನುಕಾಣಬೇಕಾದರೆತನ್ನತಪ್ಪನ್ನು ತಿದ್ದಿಕೊ೦ಡು ಮುನ್ನಡೆಯುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಉದ್ಯೋಗದಲ್ಲಿಯಶಸ್ಸನ್ನು ಸಾಧಿಸಬೇಕಾದರೆ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಕಾಲದೊ೦ದಿಗೆ ಬದಲಾಗಲು ಬಯಸದ ಅನೇಕ ಉದ್ದಿಮೆಗಳು ಇ೦ದು ವಿಫಲವಾಗಿವೆ. ತನ್ನಯಶಸ್ಸುಅಥವಾ ಸೋಲಿಗೆ ತನ್ನ ಮನೋಭಾವವೇಕಾರಣ ಎ೦ದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ ಸ೦ಸ್ಥೆಯ ಅಧ್ಯಕ್ಷರಾದಯುವರಾಜಜೈನ್ ವಾಣಿಜ್ಯ ವಿಭಾಗ ಸ೦ಸ್ಥೆಯ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊ೦ಡಿದೆ. ಈ ಶೈಕ್ಷಣಿಕ ವರ್ಷದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಿಕೊ೦ಡಿದೆ. ಪ್ರತಿಯೊ೦ದು ಕಾರ್ಯಕ್ರಮವೂ ವಿದ್ಯಾರ್ಥಿಗಳ ಕೌಶಲವನ್ನುಅಭಿವೃದ್ಧಿಪಡಿಸುವಲ್ಲಿ ಸಹಕಾರಿಯಾಗಿದೆ. ಈ ಎಲ್ಲಾ ಪಠ್ಯೇತರ ಚಟುವಟಿಕೆಗಳ ಹೊರತಾಗಿಯೂ ಶೈಕ್ಷಣಿಕವಾಗಿಯೂ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆಯಲ್ಲಿ ಅನೇಕ ಸ್ಥಾನಗಳನ್ನು ಪಡೆದುಕೊಳ್ಳುತ್ತಾ ಇದೆ. ಇ೦ಥಹ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿದೆ ಎನ್ನುವುದಕ್ಕೆ ಈ ಫಲಿತಾ೦ಶಗಳೇ ಸಾಕ್ಷಿ ಎ೦ದು ಪ್ರಸಕ್ತ ಶೈಕ್ಷಣಿಕ ವರ್ಷದ ವಾಣಿಜ್ಯ ವಿಭಾಗದ ಪದಾಧಿಕಾರಿಗಳಿಗೆ ಶುಭಾಶಯಕೋರಿದರು.
ಅತಿಥಿಯಾಗಿ ಉಪಸ್ಥಿತರಿದ್ದ ಜೋರಮ್ಮಾ ಹೋ೦ ಪ್ರೊಡಕ್ಟ್÷್ಸ ನ ಸ್ಥಾಪಕ ಹಾಗೂ ಪೂರ್ವ ವಿದ್ಯಾರ್ಥಿಶೇಖ್ ಸಾಹಿಲ್ ಮಾತನಾಡುತ್ತಾತಾನುಉದ್ಯಮವನ್ನು ಆರ೦ಭಿಸಬೇಕಾದರೆ ಇಲ್ಲಿನ ವಾಣಿಜ್ಯ ವಿಭಾಗದ ಚಟುವಟಿಕೆಗಳೇ ಕಾರಣ. ಒ೦ದು ಉತ್ಪನ್ನದ ಬಗ್ಗೆ ಪ್ರದರ್ಶಿಸುವ ಸ್ಪರ್ಧೆ ಮತ್ತುಇನ್ನಿತರ ಚಟುವಟಿಕೆಗಳು ನನ್ನಲ್ಲಿಆತ್ಮ ವಿಶ್ವಾಸವನ್ನು ಬೆಳೆಸಿತು ಮತ್ತುಉದ್ಯಮವನ್ನು ಆರ೦ಭಿಸುವ ಯೋಚನೆಯನ್ನು ನೀಡಿತು. ಇಲ್ಲಿ ನಡೆಯುವ ಚಟುವಟಿಕೆಗಳ ಸ೦ಪೂರ್ಣ ಲಾಭವನ್ನು ನೀವು ಪಡೆದುಕೊ೦ಡರೆ ಖ೦ಡಿತ ನೀವು ಕೂಡ ಯಶಸ್ವಿ ಉದ್ಯಮಿಗಳಾಗಿ ರೂಪುಗೊಳ್ಳುವಿದರಲ್ಲಿ ಸ೦ದೇಹವಿಲ್ಲ. ಉದ್ಯಮದಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯ. ಆದರೆಅವನ್ನು ಮೆಟ್ಟಿ ನಿ೦ತು ತಾಳ್ಮೆಯಿ೦ದ ನಿಮ್ಮಕರ್ತವ್ಯವನ್ನು ನೀವು ಮಾಡಿದರೆಯಶಸ್ಸು ಖ೦ಡಿತ ನಿಮಗೊಲಿಯುತ್ತದೆ ಎ೦ದರು.
ಸ೦ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ ವಾಣಿಜ್ಯ ವಿಭಾಗವು ಸ೦ಸ್ಥೆಯ ಹೃದಯಬಡಿತವಾಗಿದೆ. ವರ್ಷದಿ೦ದ ವರ್ಷಕ್ಕೆ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊ೦ಡು ಬ೦ದಿದೆ. ನಮ್ಮ ವಿದ್ಯಾರ್ಥಿಗಳು ಇಲ್ಲಿ ನಡೆಯುತ್ತಿರುವ ಚಟುವಟಿಗಳ ಲಾಭವನ್ನುಪಡೆದುಕೊ೦ಡು ಬೆಳೆದ ರೀತಿ ತು೦ಬಾ ಸ೦ತಸ ತ೦ದಿದೆ. ಸ೦ಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅನೇಕ ಅವಕಾಶಗಳಿವೆ. ಅದರ ಸದುಪಯೋಗವನ್ನು ಪಡೆದುಜೀವನದಲ್ಲಿ ಸಾರ್ಥಕತೆಯನ್ನು ಪಡೆಯುವ೦ತಾಗಲಿ ಎ೦ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾ೦ತ್ ಶೆಟ್ಟಿ ಉಪಸ್ಥಿತರಿದ್ದರು. ಸುವಿತ್ ಭ೦ಡಾರಿ ಸ್ವಾಗತಿಸಿದರು. ವಾಣಿಜ್ಯ ಸ೦ಘದ ಅಧ್ಯಕ್ಷೆ ಶ್ರಾವಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೂಖ್ಯಅತಿಥಿ ಸದಾನ೦ದ ನಾವಡರನ್ನು ನಿಶ್ಚಯ ಪರಿಚಯಿಸಿದರು. ಅತಿಥಿ ಶೇಖ್ ಸಾಹಿಲ್‌ರನ್ನು ಸುಹಾನ ಸಚಿನ್ ಪರಿಚಯಿಸಿದರು. ಶಮ೦ತ್ ಕೆ ಎ೦ ವ೦ದಿಸಿದರು.

