ಶ್ರೀ ಭ್ರಾಮರಿ ಕ್ರಿಯೇಷನ್ಸ್ ಬೈಲುಬೀಡು ಬಜಪೆ ಇವರು ಅರ್ಪಿಸುವ ಶುಭ ಮತ್ತು ದಿನೇಶ್ ನಿರ್ಮಾಣದ, ದೈವರಾಜ ಶ್ರೀ ಬಬ್ಬುಸ್ವಾಮಿಯ ತುಳು ಭಕ್ತಿಗೀತೆ
ಮಾಯದ ಪರೆಲ್ ಬಬ್ಬು ಸ್ವಾಮಿ ಇದರ ಬಿಡುಗಡೆಯು ತಾ-16-7-2025 ನೇ ಬುಧವಾರ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಭಕ್ತಿಗೀತೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ಅಡಿಗ ರವರು ಮಾತನಾಡುತ್ತಾ,ತುಳುನಾಡಿಲ್ಲೆಡೆ ದೈವರಾಜ ಶ್ರೀ ಬಬ್ಬುಸ್ವಾಮಿಯ ಕಾರಣಿಕ ಅಪಾರವಾಗಿದೆ.ಬಬ್ಬುಸ್ವಾಮಿಗೂ ಕದ್ರಿ ಕ್ಷೇತ್ರಕ್ಕೂ ಅಪೂರ್ವವಾದ ನಂಟು ಇದೆ ಎಂದು ಹೇಳಿದರು.ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿಗಳಾದ ಪುಷ್ಪಲತಾ ಶುಭ ಹಾರೈಸಿದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕಿರಣ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ರಾಜೇಂದ್ರ ಚಿಲಿಂಬಿ,ಮಂಜುನಾಥ ಕುಂದರ್ ಅದ್ಯಪಾಡಿ(ಗೌರವ ಸಲಹೆಗಾರರು ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಅಡ್ಯಾರ್ ಪದವು), ಸಾಹಿತಿ ವಿನಯನೇತ್ರ ದಡ್ಡಲಕಾಡ್, ಸಾಹಿತಿ ನವೀನ್ ಸುವರ್ಣ ಪಡ್ರೆರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ”ಬರವುದ ತುಡರ್” ನವೀನ್ ಸುವರ್ಣ ಪಡ್ರೆ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ನವೀನ್ ಸುವರ್ಣ ಪಡ್ರೆ ಇವರು ಈ ಭಕ್ತಿಗೀತೆಯನ್ನು ರಚಿಸಿದ್ದು ಕಲರ್ಸ್ ಕನ್ನಡ ಖ್ಯಾತಿಯ ಸಂದೇಶ್ ನೀರ್ ಮಾರ್ಗ ಇವರು ಈ ಭಕ್ತಿಗೀತೆಯನ್ನು ಹಾಡಿದ್ದಾರೆ.ಶ್ರೀ ಬ್ರಾಮರಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಭಕ್ತಿಗೀತೆಯು ಬಿಡುಗಡೆಗೊಂಡಿದೆ.