ವಿಶ್ವ ಕೊಂಕಣಿ ಕೇಂದ್ರದಲ್ಲಿ ವಸತಿ ಸಹಿತ ಮೂರು ದಿನಗಳ ಚಟುವಟಿಕೆ ಆಧಾರಿತ ‘ಪ್ರಗತಿ ಹಾಗೂ ಸ್ಪೂರ್ತಿ -2025’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

0
21

ದಿ. 17-07-2025  ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ  ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆಧ್ಯ ಗೌಡ್ ಬ್ರಾಹ್ಮಣ ಸಂಘ (ರಿ),  ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್  ಸಮುದಾಯದ ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಸತಿ ಸಹಿತ  ಮೂರು ದಿನಗಳ ಚಟುವಟಿಕೆ ಆಧಾರಿತ ”ಪ್ರಗತಿ ಹಾಗೂ ಸ್ಪೂರ್ತಿ -2025′ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಆಯೋಜಿಸಿತು. 

 ಈ ಕಾರ್ಯಾಗಾರವನ್ನು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದ ಗೋಪಾಲ ಶೆಣೈ, ಇವರು ದೀಪವನ್ನು ಬೆಳಗಿಸಿ ಉದ್ಘಾಟಿಸಿದರು.  ಹಾಗೂ ಶಿಬಿರಾರ್ಥಿಗಳನ್ನು ಮತ್ತು ಹೆತ್ತವರನ್ನು ಉದ್ದೇಶಿಸಿ, “ಶಿಕ್ಷಣವೆಂದರೆ ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯಾಗಿದ್ದು ಜೊತೆಗೆ ಕೌಶಲ್ಯ ಅಭಿವೃದ್ದಿಯನ್ನು ಬೆಳೆಸಿಕೊಳ್ಳಬೇಕು, ಇಂತಹ ತರಬೇತಿಯನ್ನು ಈ ಶಿಬಿರದಲ್ಲಿ ಪಡೆಯಬೇಕು. ಮಾತೃ ಭಾಷೆ ಕೊಂಕಣಿಯು ನಮ್ಮ ಅಸ್ತಿತ್ವವನ್ನು ಗುರುತಿಸುವ ಜೊತೆಗೆ, ದೈಹಿಕ, ಮಾನಸಿಕ, ಉದ್ಯೋಗ, ಸೇವಾ ಮನೋಭಾವಗಳು ಆತ್ಮವಿಶ್ವಾಸವನ್ನು ಬಲಿಷ್ಟಗೊಳಿಸುತ್ತದೆ, ಇದರಿಂದಾಗಿ ಸಮಾಜವೂ ಸದೃಢಗೊಳ್ಳುವುದು ಎಂದು  ಶುಭ ಹಾರೈಸಿದರು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಶ್ರೀ ಡಿ. ರಮೇಶ ನಾಯಕ್ ಮೈರಾ,  ಇವರು “ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ಕೌಶಲ್ಯ, ತಂತ್ರಜ್ಞಾನಗಳ ಜ್ಞಾನ ಹಾಗೂ ಅದರ ಅನ್ವಯ, ಸಾಮರ್ಥ್ಯ ಹಾಗೂ ಸಾಂಸ್ಕೃತಿಕ ಮೌಲ್ಯ,  ಉಳಿಸಿ, ಬೆಳೆಸುವ ತರಬೇತಿಯನ್ನು ನೀಡಲಾಗುವುದು, ಆದ್ದರಿಂದ ಎಲ್ಲರೂ ಇದರ ಸದುಪಯೋಗವನ್ನು ಪಡದುಕೊಳ್ಳಬೇಕು ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿ ಬಂದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಶಿಬಿರಾಥಿ೯ಗಳನ್ನು ಅಭಿನಂದಿಸಿದರು. 

ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ  ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ, ಮುಖ್ಯ ಅತಿಥಿಗಳಾಗಿ ಭಾಸ್ಕರ್ ಪ್ರಭು ಕುಲಶೇಖರ, ಹಿರಿಯರಾದ ಡೆಚ್ಚಾರು ಗಣಪತಿ ಶೆಣೈ, ಮೈರಾ ಗೋಪಾಲ್ ಸಾಮಂತ್, ಮೋಹನ್ ನಾಯಕ್ ಒಡ್ಡೂರು, ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮುರಳಿಧರ ಪ್ರಭು ವಗ್ಗ, ಕಾರ್ಯದರ್ಶಿ ಶ್ರೀ ರವೀಂದ್ರ ನಾಯಕ್ ಕುಂಟಲ್ಪಾಡಿ, ನಿಕಟಪೂರ್ವ ಅಧ್ಯಕ್ಷ ಶ್ರೀ ವಿಜಯ ಶೆಣೈ ಕೊಡಂಗೆ, ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಪದಾಧಿಕಾರಿಗಳಾದ ರಾಮಕೃಷ್ಣ ಪ್ರಭು ಮಾರಿಬೆಟ್ಟು, ಉಪೇಂದ್ರ ನಾಯಕ್ ಮೇರೀಹಿಲ್, ಪ್ರಭಾಕರ ಪ್ರಭು ಗುರುನಗರ, ಅನಂತ ಪ್ರಭು ಮರೋಳಿ, ಪಾವನಾಕ್ಷಿ ಪ್ರಭು ವಗ್ಗ, ಶ್ರೀಮತಿ ಸುಚಿತ್ರ ರಮೇಶ ನಾಯಕ್ ಮುಂತಾದವರು ಉಪಸಿತರಿದ್ದರು. ಶಿಬಿರದ ತರಬೇತುದಾರರಾದ ಕುಡ್ಪಿ ವಿದ್ಯಾಶೆಣೈ ಶಿಬಿರಾರ್ಥಿಗಳಿಗೆ ಕಾರ್ಯಾಗಾರದ ಉದ್ದೇಶ ಮತ್ತು ಅಭಿ ಶಿಕ್ಷಣ ನೀಡಿ ಶಿಬಿರಾರ್ಥಿಗಳನ್ನು ಸಜ್ಜುಗೊಳಿಸಿದರು. 

ಡಾ. ವಿಜಯಲಕ್ಷ್ಮಿ ನಾಯಕ್ ಇವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here