ದಿ.17-07-2025ರಂದು ಹರೇಕಳ ಗ್ರಾಮ ಪಂಚಾಯತ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸಿ.ಎಸ್.ಸಿ ಮಂಗಳೂರು ವತಿಯಿಂದ ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಮಾಹಿತಿ ಶಿಬಿರ ನಡೆಸಲಾಯಿತು. ಈ ಸಂದರ್ಭದಲ್ಲಿ ಹರೇಕಳ ಪಂಚಾಯತ್ ನ ಉಪಾಧ್ಯಕ್ಷರು ಅಬ್ದುಲ್ ಮಜೀದ್, ಸಿ.ಎಸ್.ಸಿ ನೋಡಲ್ ಅಧಿಕಾರಿ ಪ್ರಶಾಂತ್ ಪೂರ್ಜೆ, ಕೃಷಿ ಸಖಿ ಪ್ರಮೀಳ, ಪಂಚಾಯತ್ ಮಾಜಿ ಸದಸ್ಯರು ಮತ್ತು ಗ್ರಾಮದ ಕೃಷಿಕರು ಉಪಸ್ಥಿತರಿದ್ದರು.
ಬೆಳೆ ಸಮೀಕ್ಷೆ
2025-26ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಗೂಗಲ್ ಪ್ಲೇಸ್ಟೋರ್ ನಿಂದ ಆಪ್ಯ್ ಡೌನ್ ಲೋಡ್ ಮಾಡಿಕೊಂಡು ಕೃಷಿಕರೇ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆ ಮಾಡುವ ಪ್ರಕ್ರಿಯೆ ಕಲ್ಪಿಸಲಾಗಿದೆ. ಹೆಚ್ಚಿನ ಕೃಷಿಕರು ಬೆಳೆದಿರುವ ಬೆಳೆಗಳಿಗೆ ಸಮೀಕ್ಷೆ ಮಾಡಿಸಿಲ್ಲ. ಬೆಳೆ ಸಮೀಕ್ಷೆ ಮಾಡುವ ಮೂಲಕ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಮತ್ತು ಸರಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು.
ಬೆಳೆ ವಿಮೆ (ಫಸಲ್ ಬೀಮಾ ಯೋಜನೆ)
ಮುಂಗಾರು ಬೆಳೆಗಳಿಗೆ ಭತ್ತ, ಅಡಿಕೆ, ಕಾಳು ಮೇಣಸು ಬೆಳೆ ವಿಮೆ ನೋಂದಾವಣೆಯನ್ನು ಗ್ರಾಮ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ(ಸಿ.ಎಸ್.ಸಿ) ಮಾಡಲಾಗುತ್ತದೆ. ಹವಾಮಾನ ವೈಪರೀತ್ಯಗಳು, ಭೂ ಕುಸಿತ, ಮಳೆ ನೆರೆ, ಕೀಟದಾಳಿ, ಪ್ರಕೃತಿ ವಿಕೋಪ ದಿಂದ ನಷ್ಟವನ್ನು ತಪ್ಪಿಸಿಕೊಳ್ಳಬಹುದಾಗಿದೆ.
ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳಿಗೆ ಪ್ರಿಮಿಯಂ ಮೊತ್ತದ ವಿವರ (ಪಾವತಿಸಲು ಕೊನೆಯ ದಿನಾಂಕ 31-07-2025)
ಅಡಿಕೆ ಬೆಳೆ : 1 ಎಕರೆಗೆ ರೂ.2,590.09 ಕೃಷಿಕರು ಪಾವತಿಸಬೇಕಾಗುತ್ತದೆ. ಒಟ್ಟು ರೂ.51,801.60 ಪ್ರಿಮಿಯಂ ಮೊತ್ತ ಪಡೆಯಬಹುದಾಗಿದೆ.
ಕಾಳು ಮೆಣಸು : 1 ಎಕರೆಗೆ ರೂ.951.05 ಕೃಷಿಕರು ಪಾವತಿಸಬೇಕಾಗುತ್ತದೆ. ಒಟ್ಟು ರೂ.19,020.90 ಪ್ರಿಮಿಯಂ ಮೊತ್ತ ಪಡೆಯಬಹುದು.
ನೋಂದಾವಣೆಗೆ ಬೇಕಾಗುವ ದಾಖಲೆಗಳು
1) ಬೆಳೆ ಸಮೀಕ್ಷೆ ಆಗಿರಬೇಕು.
2) ರೈತರ ಆಧಾರ್ ಕಾರ್ಡ್ ಪ್ರತಿ.
3) ಜಮೀನಿನ ಸರ್ವೇ ನಂಬರ್/ಆರ್.ಟಿ.ಸಿ ಪ್ರತಿ.
4) ರೈತರ ಬ್ಯಾಂಕ್ ಪಾಸ್ ಬುಕ್.
5) ನಾಮಿನಿ ಆಧಾರ್ ಕಾರ್ಡ್.
ಇನ್ನಿತರ ವಿಚಾರಗಳ ಕುರಿತು ಶಿಬಿರದಲ್ಲಿ ಸಿ.ಎಸ್.ಸಿ ನೋಡಲ್ ಅಧಿಕಾರಿಯವರು ಕೃಷಿಕರಿಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.