ಕಾಪು: ತುಳುನಾಡ ರಕ್ಷಣಾ ವೇದಿಕೆ ಕಾಪು ತಾಲೂಕು ಘಟಕದ ವತಿಯಿಂದ ಕಾರ್ಯಕರ್ತರ ಸಮ್ಮಿಲನ ಜು. 20ರಂದು ಹಿರಿಯಡಕದ ಕೋಟ್ನಕಟ್ಟೆ ಸುರಭಿ ಹಾಲ್ನಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 10 ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು, ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉದಯಕುಮಾರ್ ಶೆಟ್ಟಿ ಮುನಿಯಾಲು ಅವರು ಸಮ್ಮಿಲನಕ್ಕೆ ಚಾಲನೆ ನೀಡಲಿದ್ದಾರೆ.
ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಶಾಂತ್ ಭಟ್ ಕಡಂಬ, ಫ್ರ್ಯಾಂಕಿ ಡಿಸೋಜ, ಪುನಿತ್ ಕುಮಾರ್, ಡಾ. ರವೀಂದ್ರ, ಡಾ. ಸಂದೀಪ್ ಸನಿಲ್, ಜಯ ಪೂಜಾರಿ, ಸುನಂದ ಕೋಟ್ಯಾನ್, ಸುಧಾಕರ ಅಮೀನ್, ಜಯರಾಮ ಪೂಜಾರಿ, ಸುರೇಂದ್ರ ಪೂಜಾರಿ, ವೇಣು ಪೂಜಾರಿ, ಸತೀಶ್ ಪೂಜಾರಿ ಕೀಳಂಜೆ, ಉಮೇಶ್ ಪೂಜಾರಿ ಬಾಣಬೆಟ್ಟು, ಸುನಿಲ್ ಫೆರ್ನಾಂಡೀಸ್, ಪ್ರದೀಪ್ ಪೂಜಾರಿ, ಸತೀಶ್ ಖಾರ್ವಿ, ರಮಾಕಾಂತ ಶೆಟ್ಟಿ, ಅನುಸೂಯ ಶೆಟ್ಟಿ, ಅವಿನಾಶ್ ಶೆಟ್ಟಿ, ಕುಶಲ್ ಅಮೀನ್ ಭಾಗವಹಿಸಲಿದ್ದಾರೆ.