40 ಖಾಸಗಿ ಶಾಲೆಗಳಿಗೆ ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ  ಸಂದೇಶ!

0
46

ಬೆಂಗಳೂರು: ನಗರದ ಆರ್​​.ಆರ್​ ನಗರ, ಕೆಂಗೇರಿ ಸೇರಿದಂತೆ 40 ಖಾಸಗಿ ಶಾಲೆಗಳಿಗೆ ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ  ಸಂದೇಶ ರವಾನಿಸಲಾಗಿದೆ. roadkill333@atomicmail.io ಎಂಬ ಇ-ಮೇಲ್​ನಿಂದ ಸಂದೇಶ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ಮಾಡಿದ್ದಾರೆ.

ಬಾಂಬ್ ಬೆದರಿಕೆ ಇ-ಮೇಲ್​ನಲ್ಲಿ ಏನಿದೆ?

ನಮಸ್ಕಾರ, ಶಾಲಾ ತರಗತಿಗಳಲ್ಲಿ ನಾನು ಹಲವು ಸ್ಫೋಟಕ ವಸ್ತುಗಳು ಇರಿಸಿದ್ದೇನೆ. ಸ್ಫೋಟಕಗಳನ್ನು ಕಪ್ಪು ಪ್ಲಾಸ್ಟಿಕ್ ಚೀಲಗಳಿಂದ ಮುಚ್ಚಿಡಲಾಗಿದೆ. ನಿಮ್ಮೆಲ್ಲರನ್ನೂ ಈ ಲೋಕದಿಂದ ಅಳಿಸಿಹಾಕುತ್ತೇನೆ. ಯಾರೋಬ್ಬರು ಬದುಕುಳಿಯುವುದಿಲ್ಲ. ಈ ಸುದ್ದಿಯನ್ನು ನಾನು ನೋಡುವಾಗ ಸಂತೋಷದಿಂದ ನಗುತ್ತೇನೆ ಎಂದು ಕಿಡಿಗೇಡಿ ಇ-ಮೇಲ್​ನಲ್ಲಿ ಉಲ್ಲೇಖಿಸಿದ್ದಾನೆ.

ದೆಹಲಿಯ 10ಕ್ಕೂ ಹೆಚ್ಚು ಶಾಲೆಗಳಿಗೂ ಬಾಂಬ್ ಬೆದರಿಕೆ

ಇನ್ನು ದೆಹಲಿಯ 10ಕ್ಕೂ ಹೆಚ್ಚು ಶಾಲೆಗಳಿಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸ್​ ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಶಾಲೆಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಹೀಗಾಗಿ ಹುಸಿ ಬಾಂಬ್ ಸಂದೇಶ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here