ಗುರುವಾಯನಕೆರೆ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಗುರುವಾಯನಕೆರೆ ತಾಲೂಕು ಯಾಂತ್ರಿಕೃತ ಭತ್ತದ ಕೃಷಿ ನಾಟಿಗೆ ಸಸಿ ಮಡಿ ಹಸ್ತಾಂತರ

0
19

ಶ್ರೀ ಕ್ಷೇ. ಧ.ಗ್ರಾ ಯೋ. ಬಿಸಿ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರು ದಿನೇಶ್ ಡಿ. ರವರು ಗದ್ದೆ ಮನೆಯ ಪ್ರಗತಿಪರ ಕೃಷಿಕರಿಗೆ ವಿಶ್ವನಾಥ ರವರಿಗೆ ಸಸಿ ಮಡಿ ಹಸ್ತಂತರಿಸಿ ಮಾತನಾಡಿ ಭತ್ತ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಯುವ ಜನತೆ ಭತ್ತ ಕೃಷಿಯತ್ತ ಆಕರ್ಷಣೆಯಾಗುತ್ತಿದ್ದು,ಇಂದು ಭತ್ತ ಕೃಷಿ ಉಳಿಯಲು ಯಂತ್ರೋಪಕರಣವೇ ಮೂಲ ಆಧಾರವಾಗಿದೆ.ಕೂಲಿಯಾಳುಗಳ ಸಮಸ್ಯೆಯನ್ನು ನಿವಾರಿಸಿ ಇಂದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಲು,ಕ್ಲಪ್ತ ಸಮಯದಲ್ಲಿ ಉಳುಮೆ ನಾಟಿ,ಕಟಾವಿಗೆ ಯಂತ್ರಗಳ ಪೂರ್ಣವಾದ ಬಳಕೆ ಮಾಡುತ್ತಿರುವುದರಿಂದ ಭತ್ತ ಕೃಷಿಯು ಅತ್ಯಂತ ಸುಲಭದ ಕೃಷಿಯಾಗಿದೆ.ಎನ್ನುವ ಮೂಲಕ ಮಾಹಿತಿ ನೀಡಿದರು
ತಾಲೂಕಿನ ಯೋಜನಾಧಿಕಾರಿ ಅಶೋಕ್, ಕೃಷಿ ಮೇಲ್ವಿಚಾರಕರು ಕೃಷ್ಣ, ಸಿಎಸ್‌ ಸಿ ನೋಡಲ್ ಅಧಿಕಾರಿ ಸುರೇಶ, ವಲಯ ಮೇಲ್ವಿಚಾರಕರು ಯಶೋಧ, ಪ್ರಗತಿಪರ ರೈತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here