ಉಡುಪಿ ಶ್ರೀಕೃಷ್ಣ ಮಠದಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಆಮಂತ್ರಣ ಪತ್ರಿಕೆ ಬಿಡುಗಡೆ

0
140

ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 48 ದಿನಗಳ ಕಾಲ ನಡೆಯಲಿರುವ ಮಂಡಲೋತ್ಸವ ಕಾರ್ಯಕ್ರಮದಲ್ಲಿ, ಯೋಗೇಶ್ವರನ ನಾಡಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ-2025 ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ, ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ (ನೊ) ಬೆಂಗಳೂರು ಸಹಭಾಗಿತ್ವದಲ್ಲಿ ಆ. ೩ರಂದು ನಡೆಯಲಿದ್ದು, ಸ್ಪರ್ಧೆಯ ಆಮಂತ್ರಣ ಪತ್ರಿಕೆ ಪರ್ಯಾಯ ಪೀಠಾಧಿಪತಿಗಳಾವರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರಮಣಾಚಾರ್ಯ,ರಮೇಶ್ ಭಟ್, ರತೀಶ ತಂತ್ರಿ, ಉಡುಪಿ ಪತಂಜಲಿ ಜಿಲ್ಲಾ ಪ್ರಭಾರಿಗಳವರಾದ ಕೆ. ರಾಘವೇಂದ್ರ ಭಟ್, ಅನಂತರಾಯ ಶೆಣೈ, ಜಗದೀಶ ಕುಮಾರ್, ಲೀಲಾ ಆರ್ ಅಮೀನ್, ಅಜೀವ ಸದಸ್ಯರಾದ ವಿಶ್ವನಾಥ್ ಭಟ್, ಸದಸ್ಯ ರಾದ ಶ್ಯಾಮಲ ಕೆ, ನಾಗರಾಜ ಶೇಟ್, ಶ್ರೀಪತಿ ಭಟ್, ಗಿರೀಶ ಉದ್ಯಾವರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here