CET ಪರೀಕ್ಷೆಯಲ್ಲಾದ ತಾಂತ್ರಿಕ ಗೊಂದಲ ಮತ್ತು ಎಂಟ್ರಿ ಫೀಸ್ ಹೇರಿಕೆಯ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸುಳ್ಯ ಘಟಕದಿಂದ ಪ್ರತಿಭಟನೆ.

0
23

ಸುಳ್ಯ,:KCET ಅಭ್ಯರ್ಥಿಗಳು ಎದುರಿಸುತ್ತಿರುವ ಸೀಟ್ ಬ್ಲಾಕಿಂಗ್, ಹಣ ವಸೂಲಿ ದಂಧೆ ಮತ್ತು ಸಾಫ್ಟ್‌ವೇರ್ ದೋಷದ ಹಿನ್ನೆಲೆಯಲ್ಲಿ ABVP ಸುಳ್ಯ ಘಟಕದಿಂದ ತಾಲೂಕು ಕಚೇರಿ ಎದುರು ರಾಜ್ಯಮಟ್ಟದ ಪ್ರತಿಭಟನೆ ನಡೆಯಿತು.

ABVP ತಾಲೂಕು ಸಂಚಾಲಕರಾದ ನಂದನ್ ಪವಿತ್ರಮಜಲು ಮಾತನಾಡಿ, ವಿದ್ಯಾರ್ಥಿಗಳು ಈಗ ಅನುಭವಿಸುತ್ತಿರುವ ತೀವ್ರ ಒತ್ತಡ ಹಾಗೂ ಅನ್ಯಾಯದ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಸಕ್ರಿಯ ಕಾರ್ಯಕರ್ತರು ಮುಳಿಯ ಸಾತ್ವಿಕ್ ಅವರು ABVP ಏಕೆ ಈ ಸಮಸ್ಯೆಯ ವಿರುದ್ಧ ಧ್ವನಿ ಎತ್ತುತ್ತಿದೆ ಎಂಬುದರ ಬಗ್ಗೆ ವಿವರಣೆ ನೀಡಿದರು.

ಹೋರಾಟದಲ್ಲಿ ABVP ಕಾರ್ಯಕರ್ತರಾದ ಹರ್ಷ,ನಮೃತ್, ಪ್ರಣ್ವಿತ್,ಜೀವನ್, ಶ್ರೀಶರಣ್, ಧನುಷ್, ವಿನಿತ್, ಅಮಿತ್, ದರ್ಶನ್,ಪುನೀತ್,ಕುಸುಮಾಧರ್, ನಿತೇಶ್, ಗಗನ್ ಮತ್ತು ಇತರ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿ ದಿಟ್ಟ ನೆರವು ನೀಡಿದರು.

ABVP ವಿದ್ಯಾರ್ಥಿಗಳ ಹಕ್ಕಿಗಾಗಿ ಹೋರಾಟ ಮುಂದುವರಿಸಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here