ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ ಅವರ ನಿಧನಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ತೆಂಕು ಹಾಗೂ ಬಡಗು ಎರಡು ತಿಟ್ಟುಗಳಲ್ಲಿ ಪ್ರೌಡಿಮೆ ಸಾಧಿಸಿ ಅಸಾಧಾರಣ ಕಲಾವಿದರಾಗಿ ಮೆರೆದ ವೆಂಕಟರಮಣ ಭಟ್ ಅವರ ಕಲಾಸೇವೆ ಚಿರಸ್ಮರಣೀಯವಾದದ್ದು ಎಂದು ಅವರು ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.