ಶ್ರೀದೇವಿ ಮುತ್ತು ಮಾರಿಯಮ್ಮ ದೇವಾಲಯದ 44ನೇ ವರ್ಷದ ಹೂವಿನ ಕರಗ ಮಹೋತ್ಸವ : ಕರಗಹೊತ್ತ ಶ್ರೀ ಪದ್ಮಾವತಿ ಅಮ್ಮನವರು

0
6

ಬೆಂಗಳೂರು: ನಂದಿನಿ ಲೇಔಟ್, ಕೃಷ್ಣಾನಂದನಗರದಲ್ಲಿ ಶ್ರೀದೇವಿ ಮುತ್ತು ಮಾರಿಯಮ್ಮ ದೇವಾಲಯದ 44ನೇ ವರ್ಷದ ಹೂವಿನ ಕರಗ ಮಹೋತ್ಸವ ನಡೆಯಿತು.
ಮಾಜಿ ಸಚಿವ ಹಾಗು ಶಾಸಕ ಕೆ.ಗೋಪಾಲಯ್ಯ. ದೇವಾಲಯದ ಧರ್ಮಧಿಕಾರಿ ಜಿ. ವೆಂಕಟೇಶ್ ಮತ್ತು ಸ್ಥಳೀಯ ಮುಖಂಡರು. ಕರಗ ಮಹೋತ್ಸವ ದಲ್ಲಿ ಪಾಲ್ಗೊಂಡರು.
ಶ್ರೀ ಪದ್ಮಾವತಿ ಅಮ್ಮನವರು ಸತತವಾಗಿ 44ನೇ ಬಾರಿಗೆ ವಿಶೇಷ ಹೂವಿನ ಕರಗವನ್ನು ಹೊತ್ತು ಮೆರವಣಿಗೆ ಮೂಲಕ ಸಂಚರಿಸಿ ರಾತ್ರಿ 10.30 ಕ್ಕೆ ಅಗ್ನಿಕುಂಡವನ್ನು ತುಳಿಯುವ ಮೂಲಕ ಕರಗ ಯಶಸ್ವಿಯಾಗಿ ಸಂಪನ್ನವಾಯಿತು.
ಮಹಿಳೆಯೊಬ್ಬರು ಕರಗ ಹೊತ್ತಿರುವುದು ವಿಶೇಷವಾಗಿತು. ಸಹಸ್ರಾರು ಭಕ್ತರು ಕರಗ ಮಹೋತ್ಸವದಲ್ಲಿ ಭಾಗವಹಿಸಿ ಕರಗವನ್ನು ಕಣ್ಣು ತುಂಬಿಕೊಂಡರು.
ಪದ್ಮಾವತಿ ಅಮ್ಮನವರು ಕರಗವನ್ನು ಹೊತ್ತು ಯಶವಂತಪುರ ಎಪಿಎಂಸಿ ಯಾರ್ಡ್, ಶಂಕರ್ ನಗರ, ಗೌತಮ್ ನಗರ, ಮಾರಪ್ಪನ ಪಾಳ್ಯ, ಸೋಮೇಶ್ವರನಗರ, ವಿಜಯಾನಂದ ನಗರ. ಕೃಷ್ಣಾನಂದ ನಗರದ ಮುಖ್ಯಬಿದಿಗಳಲ್ಲಿ ಮೆರವಣಿಗೆಯಲ್ಲಿ ಸಂಚರಿಸಿದರು. ರಸ್ತೆ ಉದಕೂ ಸ್ಥಳೀಯನಿವಾಸಿಗಳು ರಸ್ತೆ ಗೇ ನೀರುಹಾಕಿ ರಂಗವಲ್ಲಿ ಹಾಕಿ ಆರತಿ ಬೆಳಗಿ ಕರಗ ವನ್ನು ಬರಮಾಡಿಕೊಂಡರು

LEAVE A REPLY

Please enter your comment!
Please enter your name here