ಇಂದಿನ ಸಮಾಜದ ಎಲ್ಲಾ ಸಮಸ್ಯೆಗಳಿಗೆ ಮುಖ್ಯ ಕಾರಣ ಶಾಲೆಗಳಲ್ಲಿ ಅಂಕಗಳಿಗೋಸ್ಕರ ಇರುವಂತ ಪೈಪೋಟಿ. ಮಕ್ಕಳಲ್ಲಿ ಜೀವನ ಮೌಲ್ಯವನ್ನು ಕಲಿಸಿಕೊಡುವಲ್ಲಿ ಹಿಂದೆ ಬೀಳತ್ತಿದ್ದೇವೆ. ವಿದ್ಯಾರ್ಥಿಗಳು ಅಂಕಗಳ ಹಿಂದೆ ಬೀಳದೆ ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳಬೇಕು. ಶಿಕ್ಷಣದ ಮುಖ್ಯ ತತ್ವ ವ್ಯಕ್ತಿತ್ವದ ನಿರ್ಮಾಣ , ದೇಶಭಕ್ತಿಯ ನಿರ್ಮಾಣ ಎಂದು ಡಾ.ಕೆ. ನಾರಾಯಣ್ ಶೆಣೈ ಹೇಳಿದರು .
ಯು .ಎಸ್ . ನಾಯಕ್ ಪ್ರೌಢಶಾಲೆ ಪಟ್ಲ ಆಶ್ರಯದಲ್ಲಿ ನಡೆದ ಸಮಾಜ ವಿಜ್ಞಾನ ತರಬೇತಿ ಕಾರ್ಯಗಾರದಲ್ಲಿ ರೂರಲ್ ಎಜುಕೇಶನ್ ಸೊಸೈಟಿ (ರಿ,)ಪಟ್ಲ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕರಾದ ಡಾ| ಕೆ . ನಾರಾಯಣ್ ಶೆಣೈ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದರು .
ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಆಯೋಜಿಸಿದ ಒಂದು ದಿನದ ಸಮಾಜ ವಿಜ್ಞಾನ ತರಬೇತಿಯು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಪಾಂಡುರಂಗ ಪೈ ಸಿದ್ಧಾಪುರ ದೀಪ ಬೆಳಗಿಸಿ ಕಾರ್ಯಗಾರವನ್ನು ಉದ್ಘಾಟಿಸಿದರು .
ವೇದಿಕೆಯಲ್ಲಿ ರೂರಲ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀಶಾ ನಾಯಕ್ ಉಪಸ್ಥಿತರಿದ್ದರು .ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಾಸ್ತಾವಿಕ ಮಾತನಾಡಿದರು .
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಶಾಂತಪ್ಪ ಮೂಲಂಗಿ ಸ್ವಾಗತಿಸಿದರು .
ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಹಿರಿಯ ಪ್ರಾಥಮಿಕ ಶಾಲೆಯ ಗುರೂಜಿ ಸೀತಾರಾಮ ವಂದನೆ ಸಲ್ಲಿಸಿದರು.ವರ್ಣಶ್ರೀ ಮಾತಾಜಿ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಉತ್ತೇಜನ ಕಾರ್ಯಕ್ರಮದ ಅಂಗವಾಗಿ 2024 – 25 ನೇ ಸಾಲಿನ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕವನ್ನು ಗಳಿಸಿದ ಸಂಸ್ಥೆಯ ಅಭಿನವ ಅಶೋಕ ನಾಯ್ಕ ಇವರಿಗೆ ಸನ್ಮಾನ ಮಾಡಲಾಯಿತು.
ಸಮಾಜ ವಿಜ್ಞಾನ ತರಬೇತಿ ತರಬೇತಿಯನ್ನು ನರೇಂದ್ರ ಕುಮಾರ್ ಕೋಟ ಮತ್ತು ರೇವತಿ ಉಪ್ಪೂರು ರಾಜ್ಯಮಟ್ಟದ ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು.
ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆಯಿಂದ ಒಂಬತ್ತು ಸಂಸ್ಥೆಗಳಿಂದ ಒಟ್ಟು 26 ಶಿಕ್ಷಕರು ತರಬೇತಿ ಪ್ರಯೋಜನವನ್ನು ಪಡೆದರು. ಸಂಜೆ ಸಮಾರೋಪದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.ಶಾಲೆಯ ಎಲ್ಲ ಗುರೂಜಿ -ಮಾತಾಜಿಯವರು ಕಾರ್ಯಾಗಾರಕ್ಕೆ ಸಂಪೂರ್ಣ ಸಹಕಾರ ನೀಡಿದರು.