ಜೀವನದ ಒತ್ತಡಗಳಿಂದ ದೂರವಿರಲು ಸಂಗೀತವು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ:ವಿಶ್ವಾಸ್ ವಿ‌‌. ಅಮೀನ್

0
164

ಸುಶ್ಮಿ ಮೆಲೋಡಿಯಸ್ ಪಡುಬಿದ್ರಿ ಇದರ ವತಿಯಿಂದ ನಡೆದ “ಗಾನ ಕೋಗಿಲೆ – 2025” ಸಂಗೀತ ಸ್ಪರ್ಧೆ

ಪಡುಬಿದ್ರಿ: ಸಂಗೀತವು ಬಾಷೆ, ಸಂಸ್ಕೃತಿ ಮತ್ತು ಗಡಿಗಳನ್ನು ಮೀರಿ ಏಲ್ಲಾರಿಗೂ ಅರ್ಥವಾಗುತ್ತದೆ ಮತ್ತು ಇಷ್ಟವಾಗುತ್ತದೆ. ಜೀವನದ ಒತ್ತಡಗಳಿಂದ ದೂರವಿರಲು ಸಂಗೀತ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಸಂಗೀತ ಕ್ಷೇತ್ರದಲ್ಲಿ ಬೆಳೆಯಲು ಇಚ್ಚಿಸುವ ಯುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಇಂತಹ “ಗಾನ ಕೋಗಿಲೆ” ಕಾರ್ಯಕ್ರಮಗಳ ಮೂಲಕ ಅಗಬೇಕು‌‌. ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳು ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ” ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ. ಅಮೀನ್ ಹೇಳಿದರು.
ಅವರು ಸುಶ್ಮಿ ಮೆಲೋಡಿಯಸ್ ಪಡುಬಿದ್ರಿ ಇದರ ವತಿಯಿಂದ ನಡೆದ “ಗಾನ ಕೋಗಿಲೆ – 2025” ಸಂಗೀತ ಸ್ಪರ್ಧೆಯ ಅಡೀಷಸ್ ರೌಂಡ್ ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು .
ಗಾನ ಕೋಗಿಲೆ ಕಾರ್ಯಕ್ರಮದ ನಿರ್ದೇಶಕಿ ಸುಶ್ಮಿತಾ ಎರ್ಮಾಳ್ ಅಧ್ಯಕ್ಷತೆ ವಹಿಸಿದರು.
“ಎಲ್ಲಾ ವರ್ಗದ ಮತ್ತು ಎಲ್ಲಾ ವಯೋಮಿತಿಯ ಜನರನ್ನು ಸೆಳೆಯುವ ಶಕ್ತಿ ಸಂಗೀತಕ್ಕೆ ಇದೆ, ಭಾವನೆಗಳು, ನೆನಪುಗಳನ್ನು ಮತ್ತು ಸಂಸ್ಕೃತಿಯನ್ನು ವ್ಯಕ್ತ ಪಡಿಸುವ ಒಂದು ಪ್ರಬಲ ಮಾಧ್ಯಮವಾಗಿದೆ. ಗ್ರಾಮೀಣ ಪ್ರದೇಶದ ಉದಯನ್ಮೊಖ ಸಂಗೀತ ಪ್ರತಿಭೆಗಳನ್ನು ಗುರುತಿಸುವಂತಹ ಉತ್ತಮ ಕಾರ್ಯಕ್ರಮವಾಗಿದೆ‌” ಎಂದು ಪಡುಬಿದ್ರಿ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ ಹೇಳಿದರು‌‌
ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಪೂರ್ವ ಅಧ್ಯಕ್ಷೆ ಗೀತಾ ಅರುಣ್ , ತೀರ್ಪುಗಾರರಾದ ಶೋಭಾ ಐತಾಳ್ , ಸಚಿನ್ ಸಾಲ್ಯಾನ್ , ಸ್ವಾತಿ ಬಾರ್ಕೋರು ಉಪಸ್ಥಿತರಿದ್ದರು. ಅಡೀಶನ್ ರೌಂಡ್ ಸ್ಪರ್ಧೆಯಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಡೆಗಳಿಂದ 64 ಸ್ಪರ್ಧಾಳುಗಳು ಭಾಗವಹಿಸಿದ್ದು., ಜುಲೃೆ 27 ರಂದು ಪಡುಬಿದ್ರಿ ಸುಜಾತ ಆಡಿಟೋರಿಯಂ ನಲ್ಲಿ ಫೃೆನಲ್ ರೌಂಡ್ ನಡೆಯಲಿದೆ.
ಸಂತೋಷ್ ಪಡುಬಿದ್ರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here