ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ( ರಿ) ಬೆಂಗಳೂರು ಇದರ ಉಡುಪಿ ಜಿಲ್ಲಾ ಸಮಿತಿಯ ಸಭೆ ಜಿಲ್ಲಾಧ್ಯಕ್ಷರಾದ ಶ್ರೀಧರ ಅಮೀನ್ ರವರ ಅಧ್ಯಕ್ಷತೆಯಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಮಣಿಪುರ ಇದರ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ ಬಗ್ಗೆ ಚರ್ಚಿಸಲಾಯಿತು. ಗೀತಾಂಜಲಿ ಸುವರ್ಣ, ಚಂದ್ರಶೇಖರ ಸಾಲ್ಯಾನ್, ಅಮೃತಾ ಪೂಜಾರಿ ಇವರನ್ನು ಗೌರವ ಸಲಹೆಗಾರರಾಗಿ, ರಾಕೇಶ್ ಪೂಜಾರಿ ವರ್ವಾಡಿ ಇವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾದ ಪ್ರವೀಣ್ ಪೂಜಾರಿ ಕಾಪು , ಖಜಾಂಚಿ ಕೇಶವರಾಜ್ ಸದಸ್ಯರಾದ ಸುರೇಶ ಕೋಟ್ಯಾನ್, ಗಣೇಶ್ ಕುಮಾರ್ ಸಂಪಿಗೆ ನಗರ , ಪ್ರವೀಣ್ ಉದ್ಯಾವರ , ಪದ್ಮನಾಭ ಪೂಜಾರಿ, ಅಕ್ಷಿತ್ ಸಾಲ್ಯಾನ್, ಸುಕುಮಾರ ಪೂಜಾರಿ, ಧೀರಜ್ ಪೂಜಾರಿ, ದಾಸ ಅಮೀನ್ ಕೊರಂಗ್ರಪಾಡಿ, ಸಂಪತ್ ಪೂಜಾರಿ, ಕಿಶೋರ್ ಅಂಚನ್ ಪೆರ್ಡೂರ್ ಭಾಗವಹಿಸಿದರು.