ಕಾಂತಾವರ ಯಕ್ಷದೇಗುಲ ವಾರ್ಷಿಕ ಯಕ್ಷೋಲ್ಲಾಸದಲ್ಲಿ  ಗುಂಡಿಮಜಲು ಮತ್ತು ಜೋಗಿದ್ವಯರಿಗೆ “ಯಕ್ಷದೇಗುಲ” ಪ್ರಶಸ್ತಿ

0
20

ಕಾಂತಾವರ : ಯಕ್ಷದೇಗುಲ   ಸಂಸ್ಥೆಯ ವಾರ್ಷಿಕ  ಯಕ್ಷೋಲ್ಲಾಸ ಸಮಾರಂಭವು ಕಳೆದ ಆದಿತ್ಯವಾರ  ಶ್ರೀ ಕ್ಷೇತ್ರ ಕಾಂತಾವರದಲ್ಲಿ ಜರಗಿತು.  ನಿರಂತರ ಹನ್ನೆರಡು ತಾಸಿನ ಯಕ್ಷೋಲ್ಲಾಸ ಸಮಾರಂಭವನ್ನು  ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿವರ ಉಪಸ್ಥಿತಿಯಲ್ಲಿ  ಬಾರಾಡಿ ಬೀಡು ಸಂಜಯ್ ಬಲ್ಲಾಳ್ ರವರು ಉದ್ಘಾಟಿಸಿದರು. 

 ನಂತರ ನಡೆದ ಸಮಾರಂಭದಲ್ಲಿ  ತೆಂಕುತಿಟ್ಟಿನ ಇಬ್ಬರು ಹಿರಿಯ ಕಲಾವಿದರಾದ ಬಿ .ಸಿ. ರೋಡು ಶಿವರಾಮ ಜೋಗಿಯವರಿಗೆ ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ, ಗುಂಡಿಮಜಲು ಗೋಪಾಲ ಭಟ್ಟರಿಗೆ  ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ನಿ.ಅದ್ಯಾಪಕ  ಪಶುಪತಿ ಶಾಸ್ರೀಯವರು  ದಿವಂಗತರುಗಳ ಸಂಸ್ಮರಣೆ ಮತ್ತು ಅಭಿನಂದನಾ ಭಾಷಣ ಮಾಡಿದರು.  ಪ್ರಧಾನ ಅತಿಥಿ ಕಾರ್ಕಳದ ಪ್ರೊ. ಕೃಷ್ಣ ಭಟ್ಟರು ಮಾತನಾಡಿ ಪುರಾತನ ಕಲೆಗಳೆಲ್ಲ ಇಂತಹ  ಹಳ್ಳಿ ಪ್ರದೇಶದ ಸಂಘಟನೆಗಳಿಂದಲೇ ಉಳಿಯುವುದು, ಬೆಳೆಯುವುದು ಎಂದು  ಹೇಳುತ್ತ ಸಂಸ್ಥೆಯ ಇಪ್ಪತ್ಮೂರು ವರ್ಷಗಳ  ಯಕ್ಷಗಾನ ಚಟುವಟಿಕೆಗಳನ್ನು ಶ್ಲಾಘಿಸಿದರು.

ನಿ.ಅದ್ಯಾಪಕ ವಿಠಲ ಶೆಟ್ಟಿ ಬೇಲಾಡಿಯವರು  ಶುಭಾಶಂಸನೆ ಗೈದರು. ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿ, ಹಾಗೂ ಪ್ರೊ.ಪದ್ಮನಾಭ ಗೌಡರು  ಗ್ರಾಮ ಪಂ.ಅದ್ಯಕ್ಷ ರಾಜೇಶ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ  ವೇದಿಕೆಯಲ್ಲಿದ್ದರು.

ಸಂಸ್ಥೆಯ ಅದ್ಯಕ್ಷ ಶ್ರೀಪತಿ ರಾವ್, ಕೋಶಾದ್ಯಕ್ಷ ಧರ್ಮರಾಜ ಕಂಬಳಿ,ಹಾಗೂ  ರಮೇಶ್ ಶೆಟ್ಟಿಗಾರ್, ಲಿಂಗಪ್ಪ ದೇವಾಡಿಗ, ಸಂಜೀವ ಕೋಟ್ಯಾನ್,   ಪವನಂಜಯ ಹೆಗ್ಡೆ,ಹರೀಶ್ ಬಂಗೇರಾ, ಬೆಳುವಾಯಿ ಸಂದೇಶ್ ಭಂಡಾರಿ , ಸದಾನಂದ ಶೆಟ್ಟಿ ,,ಸುದರ್ಶನ್ ಆಚಾರ್ಯ,ವೆಂಕಟೇಶ್ ಕಾರ್ಕಳ, ಉದಯ್ ಪಾಟ್ಕರ್ , ಯಕ್ಷ ಬಾಲಕರು ಉಪಸ್ಥಿತರಿದ್ದರು. ಯಕ್ಷರಂಗದಿಂದ ಅಗಲಿದ ಪಾತಾಳ ವೆಂಕಟ್ರಮಣ ಭಟ್ ಮತ್ತು ಸಿದ್ದಕಟ್ಟೆ ಸದಾಶಿವ ಸೆಟ್ಟಿಗಾರ್ ರವರ ಆತ್ಮಕ್ಕೆ ಚಿರಶಾಂತಿ ಕೋರಿ ಶೃಧ್ದಾಂಜಲಿ ಅರ್ಪಿಸಲಾಯಿತು. ಅನಾರೋಗ್ಯ ಪೀಡಿತರಾದ ಕಾಂತಾವರದ ಇಬ್ಬರು ಬಾಲಕರಿಗೆ ಸಂಸ್ಥೆಯ ವತಿಯಿಂದ ಸಹಾಯಧನ ನೀಡಲಾಯಿತು.

ಎಂ.ದೇವಾನಂದ್ ಭಟ್ ಮತ್ತು ಶಿವಪ್ರಸಾದ್ ಭಟ್,ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾದ್ಯಕ್ಷ ಮಹಾವೀರ ಪಾಂಡಿ ಸ್ವಾಗತಿಸಿ ವಂದಿಸಿದರು.ನಂತರ ತೆಂಕುತಿಟ್ಟಿನ  ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಆಟ, ಕೂಟ ಬಯಲಾಟ ಜರಗಿತು.

LEAVE A REPLY

Please enter your comment!
Please enter your name here