ಮುಲ್ಕಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಮುಲ್ಕಿ ಘಟಕದ ಆಶ್ರಯದಲ್ಲಿ 23ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ಜು. 27ರಂದು ಮುಲ್ಕಿ ಬಿಲ್ಲವ ಸಂಘದಲ್ಲಿ ನಡೆಯಲಿದೆ.
ಪುತ್ತೂರು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷ ವಿನಯ ಕುಮಾರ್ ಮಟ್ಟು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ದಿನೇಶ್ ಸುವರ್ಣ ರಾಯಿ ಅವರು ಆಟಿ ಆಚರಣೆ ವಿಶೇಷತೆ ಬಗ್ಗೆ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ತುಳು ಚಿತ್ರ ನಿರ್ಮಾಪಕ, ನಟ ಶೋಧನ್ ಶೆಟ್ಟಿ ಭಾಗವಹಿಸಲಿದ್ದಾರೆ. ಮಂಗಳೂರು ಅಖಿಲ ಭಾರತ ಬಿಲ್ಲವ ಯೂನಿಯನ್‌ನ ಅಧ್ಯಕ್ಷರಾದ ನವೀನ್‌ಚಂದ್ರ ಡಿ. ಸುವರ್ಣ ಅವರಿಗೆ ಸನ್ಮಾನ ಕಾರ್ಯಕ್ರಮವಿದ್ದು, ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿರುವ ವಾಮನ ಕೋಟ್ಯಾನ್ ನಡಿಕುದ್ರು ಕಾರ್ಯಕ್ರಮದ ಸಹಭಾಗಿತ್ವ ವಹಿಸಲಿದ್ದಾರೆ.
